ಧಾರ್ಮಿಕ ಶುದ್ಧೀಕರಣ ಮತ್ತು ಪ್ರಾಯಶ್ಚಿತ

ವಿಶ್ವದ ಯಾವುದೇ ಧರ್ಮವನ್ನು ನೋಡಿದರೂ ಸಹ ಅಲ್ಲಿ, ಸಾಮಾನ್ಯ ಜೀವನಕ್ಕೆ ಹೊಂದಿಕೊಂಡಂತಹ ಶುದ್ಧೀಕರಣ ಕ್ರಿಯೆ ಇರುವುದನ್ನು ನೀವು ಗಮನಿಸಿರಬಹುದು. ಜನನ ಮತ್ತು ಮರಣ, ಹೆಣ್ಣು ಮಗಳು ಮುಟ್ಟಾದಾಗ, ವಾಯು, ನಿದ್ರೆ, ಲೈಂಗಿಕ ಸಂಪರ್ಕ, ಪ್ರಜ್ಞೆ ತಪ್ಪಿದಾಗ, ರಕ್ತ ಸೋರಿದಾಗ, ವಾಂತಿ ಹಾಗೂ ರೋಗ ಇತರೆ ವಿಚಾರಗಳು ಕಾಣಿಸಿಕೊಂಡಾಗ ಶುದ್ಧೀಕರಣ ನಡೆಯುತ್ತದೆ.

ಕೆಲವು ಪ್ರಾಯಶ್ಚಿತ ಕ್ರಮಗಳು ಬಹಾಯಿ ನಂಬಿಕೆಯ ಪ್ರಕಾರ ನಡೆದರೆ, ಉಳಿದವುಗಳು ಅವರ ದೇಹವನ್ನು ನೀರಿನಲ್ಲಿ ಸಂಪೂರ್ಣ ಮುಳುಗು ಹಾಕುವುದನ್ನು ಬಯಸುತ್ತವೆ.

ಯಹೂದಿಗಳು, ಕೈ ತೊಳೆಯುವುದು, ಮಿಕ್ವಾ ಕ್ರಮಗಳು, ಮುಸ್ಲಿಮರು ಗುಸ್ಲ್ ಹಾಗೂ ವುಡು ಮೂಲಕ ಈ ಧಾರ್ಮಿಕ ಕ್ರಿಯೆ ಮಾಡುತ್ತಾರೆ. ಹಿಂದೂಗಳು ಪವಿತ್ರ ನದಿ ಗಂಗೆಯಲ್ಲಿ ಸ್ನಾನ ಮಾಡುವುದರ ಮೂಲಕ, ಆಚಮನ ಹಾಗೂ ಪುಣ್ಯಾಹವಾಹನದ ಮೂಲಕ ಶುದ್ಧೀಕರಣ ಮಾಡುತ್ತಾರೆ. ಶಿಂಟೋಯಿಸ್ಟ್ ಗಳು, ಮಿಸೊಗಿ ಮೂಲಕ ಮತ್ತು ಅಮೇರಿಕಾದ ಮೂಲ ನಿವಾಸಿಗಳು ಸ್ವೀಟ್ ಲಾಡ್ಜ್ ಮೂಲಕ ಶುದ್ಧರಾಗುತ್ತಾರೆ.

ಈ ಎಲ್ಲಾ ಧರ್ಮಗಳ ಪ್ರಾಪಂಚಿಕ ದೃಷ್ಠಿಕೋನ ಬೇರೆಬೇರೆಯಾಗಿವೆ. ಆದರೆ ಇವೆಲ್ಲವುಗಳಲ್ಲಿ ನೀರಿನ ಪ್ರಾಮುಖ್ಯತೆ ಒಂದೇ ರೀತಿಯಾಗಿ ಕಾಣಿಸುತ್ತದೆ. ಒಬ್ಬ ಮನುಷ್ಯ ಪ್ರಜ್ಞಾಪೂರ್ವಕವಾಗಿ ತನ್ನ ಅಶುಚಿತ್ವವನ್ನು ಗುರುತಿಸಿ, ಶುಚಿಯಾಗಲು ಪ್ರಾಯಶ್ಚಿತದ ಮೂಲಕ ಶುದ್ಧೀಕರಣ ಕ್ರಿಯೆಗೆ ಒಳಗಾಗುತ್ತಾನೆ.

ಈ ಸ್ವಅರಿವು, ಕೆಲವು ಧರ್ಮಗಳಲ್ಲಿ ಕಾಣಿಸಿದ್ದು, ಇದು ಮನುಷ್ಯನ ಮನಸ್ಸಿನ ಅರಿವಿನಲ್ಲಿ ಜರಗುವ ವರ್ತನೆಯಾಗಿದ್ದು, ವಿಧಾನದ ಮೂಲಕ ಅಲೌಕಿಕ ಸತ್ಯವನ್ನು ತಿಳಿಯುವುದಾಗಿದೆ. ಹಿರಿಯರು ಹೇಳಿದಂತೆ, ಶುಚಿತ್ವವೇ ದೇವರು. ಅದಾಗ್ಯೂ, ಈ ಭೌತಿಕ ಹಾಗೂ ವಾಸ್ತವಿಕತೆಗಳ ನಡುವೆ ಒಂದು ಬಂಧವಿದ್ದು, ಇದು ಧಾರ್ಮಿಕ ಅಸಮಧಾನ, ಅಸಹಕಾರಗಳನ್ನು ಸರಿದೂಗಿಸುವ ಕಾರ್ಯಮಾಡಿ, ಒಂದು ಶುಚಿತ್ವವನ್ನು ಕಾಪಾಡುವ ಅವಕಾಶವನ್ನು ಬಳಸಬಹುದು. ದೈವಿಕ ಅಂಶಗಳು ಮೂಲಭೂತವಾಗಿ ಅಂತರ್ಭೋದನೆಯಿಂದ ನಡೆಯುವ ನಿರಂತರ ಪ್ರಕ್ರಿಯೆಗಳಾಗಿದ್ದು, ಇಲ್ಲಿ ಶುಚಿತ್ವ, ನಿಲ್ಲದ ಚಕ್ರವಾಗಿ, ಸಂಪೂರ್ಣ ಸ್ವಚ್ಛತೆಯ ಕುರಿತು ಸರಿಯಾದ ಮಾಹಿತಿ ನೀಡುತ್ತಿಲ್ಲ. ಶುಚಿತ್ವ ಹಾಗೂ ಪಾವಿತ್ರ್ಯತೆಯ ಪರಿಕಲ್ಪನೆ ಕುರಿತಾಗಿ ಬರುತ್ತಿರುವ ಅಭಿಪ್ರಾಯಗಳಿಂದ ತಿಳಿಯುವುದೇನೆಂದರೆ, ಅರ್ಹತೆಯ ದಾಸ್ತಾನನ್ನು ರೂಪಿಸುವಲ್ಲಿ ಸೋಲುತ್ತಿವೆ ಎಂದು. ಸ್ವಲ್ಪ ಸಮಯಕಷ್ಟೇ ಜೀವಿಯಾಗಿ ಬದುಕುವ ಅವರು ಅನೈತಿಕತೆಯಿಂದ ತಮ್ಮ ಜೀವನದಲ್ಲಿ ಕುಂದುಕೊರತೆಗಳನ್ನು ಹೆಚ್ಚಿಸಿಕೊಳ್ಳುತ್ತಾ, ಕೊನೆಗೆ ಪ್ರಾಯಶ್ಚಿತಕ್ಕಾಗಿ ಬಂದು ತಮ್ಮ ಪಾಪವನ್ನು ನೀರಿನಲ್ಲಿ ತೊಳೆದು ಹಾಕಿದ್ದೇವೆ ಎಂದು ಅಂದುಕೊಳ್ಳುತ್ತಾರೆ. ಈ ಶುಚಿತ್ವದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ತೊಡೆದು ಹಾಕದಿದ್ದೂ ಸಹ, ಕೆಲವೊಂದು ಆಚರಣೆಗಳೇ ಅಶುಚಿಯಾಗಿರುವ ಕಾರಣ, ಸಮರ್ಥರನ್ನು ರೂಪಿಸಿ, ಈ ಶುಚಿಯನ್ನು ಹೋಗಲಾಡಿಸಬೇಕಿದೆ, ಆ ಮೂಲಕ ಮನುಷ್ಯರ ಹೃದಯದಲ್ಲಿ ಹೊಸ ಶುಚಿತ್ವದ ರೂಪುರೇಷೆಗಳನ್ನು ಬೆಳೆಸಬೇಕು.

ಒಟ್ಟಾರೆ, ಸ್ನಾನ, ಬಟ್ಟೆ ಒಗೆಯುವುದು ವಿಚಾರಗಳು ಬಂದಾಗ, ಅಲ್ಲಿ ನಿಜವಾಗಿಯೂ ನೈರ್ಮಲ್ಯದ ನಿಜವಾದ ಪ್ರಾಯೋಗಿಕ ಪ್ರಯೋಜನಗಳಿವೆ. ಆದರೆ, ಒಬ್ಬ ವ್ಯಕ್ತಿಯ ಆಂತರ್ಯ ಹಾಗೂ ಬಾಹ್ಯಗಳ ನಡುವಿನ ಒಟ್ಟುಗೂಡುವಿಕೆ, ದಿನಂಪ್ರತಿ ನಡವಳಿಕೆಗಳಾದ ಅವೈಜ್ಞಾನಿಕ ಚರ್ಮ ಚಿಕಿತ್ಸೆಗಳು ಧಾರ್ಮಿಕತೆಯ ದೃಷ್ಠಿಯಲ್ಲಿ ಪ್ರಾಮಾಣಿಕವಾಗಿ ಗೋಚರಿಸಿದರೂ ಸಹ, ಆತನ ದೇಹದ ಒಳಭಾಗದಲ್ಲಿ ಅಂತರಾತ್ಮಕ್ಕೆ ವಿರುದ್ಧವಾಗಿ, ಆತನ ಆಧ್ಯಾತ್ಮಿಕ ಕಲ್ಯಾಣವನ್ನು ಪ್ರಶ್ನಿಸುತ್ತವೆ.

ರಬ್ಬಿ ಯೆಶ್ವಾ ಇಂತಹ ಆಚರಣೆಗಳ ಕುರಿತು ತನ್ನ ಯಹೂದಿ ಅನುಯಾಯಿಗಳಿಗೆ ಈ ರೀತಿ ಹೇಳುತ್ತಾರೆ

ಮತ್ತಾಯನು 15:1-2,11, 17-20
15 ತರುವಾಯ ಯೆರೂಸಲೇಮಿನವರಾದ ಶಾಸ್ತ್ರಿಗಳೂ ಫರಿಸಾಯರೂ ಯೇಸುವಿನ ಬಳಿಗೆ ಬಂದು ಹೇಳಿದನು, 2 “ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯ ವನ್ನು ಯಾಕೆ ಮಾರುತ್ತಾರೆ? ಯಾಕಂದರೆ ಅವರು ರೊಟ್ಟಿ ತಿನ್ನುವಾಗ ತಮ್ಮ ಕೈಗಳನ್ನು ತೊಳಕೊಳ್ಳುವದಿಲ್ಲ ಅಂದರು.”

11 ಬಾಯೊಳಗೆ ಹೋಗುವಂಥದು ಮನುಷ್ಯನನ್ನು ಹೊಲೆಮಾಡುವದಿಲ್ಲ; ಆದರೆ ಬಾಯೊ ಳಗಿಂದ ಹೊರಗೆ ಬರುವಂಥದೇ ಮನುಷ್ಯನನ್ನು ಹೊಲೆಮಾಡುತ್ತದೆ.”

17 ಬಾಯೊಳಗೆ ಹೋಗಿ ಹೊಟ್ಟೆ ಯಲ್ಲಿ ಸೇರುವದೆಲ್ಲವೂ ಬಹಿರ್ಭೂಮಿಗೆ ಹೋಗುವ ದೆಂದು ನೀವು ಇನ್ನೂ ಗ್ರಹಿಸಲಿಲ್ಲವೋ?
18 ಆದರೆ ಬಾಯೊಳಗಿಂದ ಹೊರಗೆ ಹೊರಡುವಂಥವುಗಳು ಹೃದಯದೊಳಗಿಂದ ಬಂದು ಮನುಷ್ಯನನ್ನು ಹೊಲೆ ಮಾಡುತ್ತವೆ.. 19 ಯಾಕಂದರೆ ಹೃದಯದೊಳಗಿಂದ ಕೆಟ್ಟ ಆಲೋಚನೆಗಳು, ಕೊಲೆಗಳು, ಹಾದರಗಳು, ಜಾರತ್ವ ಗಳು, ಕಳ್ಳತನಗಳು, ಸುಳ್ಳುಸಾಕ್ಷಿ, ದೇವ ದೂಷಣೆಗಳು ಹೊರಗೆ ಬರುತ್ತವೆ. 20 ಇಂಥವುಗಳೇ ಮನುಷ್ಯನನ್ನು ಹೊಲೆಮಾಡುತ್ತವೆ; ಆದರೆ ಕೈತೊಳಕೊಳ್ಳದೆ ಊಟ ಮಾಡುವದು ಮನುಷ್ಯನನ್ನು ಹೊಲೆಮಾಡುವದಿಲ್ಲ ಅಂದನು.”

ಮಾನವನ ಕೊಳೆಯ ಜೊತೆಯಲ್ಲಿಯೇ, ಇತರೆ ಕೆಲವು ವಿಚಾರಗಳನ್ನು ತುಂಬಾ ಗಂಭೀರ ರೀತಿಯಲ್ಲಿ ಅರಿತು, ಅವುಗಳ ನೈತಿಕ ಅಧಃಪತನವನ್ನು ತಿಳಿಯುವ, ಅದರ ಒಳಾರ್ಥವನ್ನು ಬಗೆದು ಅಂತಹ ಅಶುಚಿತ್ವವನ್ನು ತೊಡೆದುಹಾಕಬೇಕು. ಶೇಕ್ಸ್ಪಿಯರ್ ಲೇಡಿ ಮ್ಯಾಕ್ಬೆತ್ ನಾಟಕದಲ್ಲಿ ಆಕೆ, ರಾಜ ಡಂಕನ್ ಕೊಲೆಯಲ್ಲಿ ತನ್ನ ಪಾತ್ರವನ್ನು ವಿಶ್ಲೇಷಿಸಿ ಆ ಪಾಪವನ್ನು ತೊಳೆಯುವಾಗ, ತನ್ನ ಕೈಯಲ್ಲಿನ ರಕ್ತದ ಕಲೆಗಳನ್ನು ನೋಡುತ್ತಾ “ಹೋಗು, ಕಳಂಕಿತ ಕಲೆಯೇ” ಎನ್ನುತ್ತಾಳೆ.

ಈ ಧಾರ್ಮಿಕ ಕ್ರಿಯೆಗಳನ್ನು ಮಾಡುವುದರಿಂದ ಸ್ವಲ್ಪ ಮಟ್ಟಿಗೆ, ತಾವು ಮಾಡಿದ ತಪ್ಪನ್ನು ಅರ್ಥೈಸಿಕೊಂಡು, ಅದರ ಕುರಿತಾಗಿ ತಮ್ಮ ಮುಗ್ಧತೆಯನ್ನು ಪ್ರಶ್ನಿಸಿ, ತಪ್ಪನ್ನು ಒಪ್ಪಿಕೊಂಡು, ಮಾನವ ಸಹಜ ಗುಣವಾಗಿ ಪ್ರಾಯಶ್ಚಿತದ ಮಾರ್ಗವಾಗಿ, ತಮ್ಮನ್ನು ಶುಚಿಯಾಗಿಸಿ, ತಮ್ಮ ನೈತಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದು ಅವರ ಜಾಗೃತಿ, ಧರ್ಮನಿಷ್ಠ, ಉತ್ಸಾಹ ಹಾಗೂ ಬಯಕೆಗಳನ್ನು ಹೆಚ್ಚಾಗಿಸಿವೆ, ಆದರೆ ಅದೇ ತಪ್ಪನ್ನು ಇನ್ನೊಮ್ಮೆ ಮಾಡಬಾರದು ಎನ್ನುವ ನಿರ್ದೇಶನ ನೀಡುವಲ್ಲಿ ಇದು ವಿಫಲವಾಗುತ್ತಿದೆ. ಮಾನವನ ಸೀಮಿತ ಹಾಗೂ ಅವಲಂಬಿತ ಸಾಮರ್ಥ್ಯಗಳನ್ನು ಅರ್ಥೈಸಿಕೊಂಡು ಆತನಿಗೆ ಸಾವಧಾನಚಿತ್ತದಿಮದ ಈ ವಿಚಾರಗಳನ್ನು ತಿಳಿಸಬೇಕಾಗುತ್ತದೆ. ಇವೆಲ್ಲವೂ ಸಾಧ್ಯವಾದರೂ ಸಹ, ಯಾವಾಗ ಆತನಿಗೆ ಶುಚಿತ್ವದ ಮಹತ್ವವನ್ನು ತಿಳಿಸುವುದು. ಇಂತಹ ಧಾರ್ಮಿಕ ಮೂಢನಂಬಿಕೆಗಳಿಂದ ಕೂಡಿದ ಪ್ರಾಯಶ್ಚಿತ ಕ್ರಿಯೆಗಳನ್ನು ನಿಲ್ಲಿಸಿದಾಗ ಮಾತ್ರ,ಅವನ ಪೂರ್ವಾಪರಗಳ ಆಧರಿತ ಶಕ್ತಿ, ಆತ್ಮಗಳು ಆತನ ಸಾವಿನೊಂದಿಗೆ ಶಾಂತಿ ಪಡಯುತ್ತವೆ.

ಅಂತಿಮವಾಗಿ, ದೇವರ ನಿಜವಾದ ಪ್ರಾತಿನಿಧ್ಯವನ್ನು, ಸರಿತಪ್ಪುಗಳ ನಿರ್ಧಾರಗಳು, ಭವಿಷ್ಯದ ತೀರ್ಪುಗಳು ಮೂಲಕ ನಾವೆಲ್ಲರೂ ಹಾಳುಮಾಡಿದ್ದೇವೆ ಎಂಬ ಅಂಶ ಹೆಚ್ಚಿನ ಎಲ್ಲಾ ಮಾನವರ ಮನಸ್ಸಿನಲ್ಲಿದೆ.

ರೋಮಾಪುರದವರಿಗೆ 2:14-16
14 ನ್ಯಾಯಪ್ರಮಾಣವಿಲ್ಲದ ಅನ್ಯಜನರು ನ್ಯಾಯಪ್ರಮಾಣದಲ್ಲಿರುವವುಗಳನ್ನು ಸ್ವಾಭಾವಿಕವಾಗಿ ಕೈಕೊಳ್ಳುವಾಗ ನ್ಯಾಯಪ್ರಮಾಣವಿಲ್ಲದ ಇವರು ತಮಗೆ ತಾವೇ ನ್ಯಾಯಪ್ರಮಾಣವಾಗಿದ್ದಾರೆ. 15 ಅವರ ಮನಸ್ಸಾಕ್ಷಿಯು ಸಹ ಸಾಕ್ಷಿಕೊಟ್ಟು ಅವರ ಯೋಚನೆಗಳು ಒಂದಕ್ಕೊಂದು ತಪ್ಪುಹೊರಿಸುತ್ತಾ ಇಲ್ಲವೆ ಪ್ರತಿವಾದ ಮಾಡುತ್ತಾ ಇರುವದರಿಂದ ಅವರು ತಮ್ಮ ಹೃದಯ ಗಳಲ್ಲಿ ಬರೆದಿರುವ ನ್ಯಾಯಪ್ರಮಾಣದ ಕ್ರಿಯೆಗಳನ್ನು ತೋರಿಸುತ್ತಾರೆ 16 ಮನುಷ್ಯರ ರಹಸ್ಯಗಳ ವಿಷಯ ವಾಗಿ ನನ್ನ ಸುವಾರ್ತೆಗನುಸಾರ ಯೇಸು ಕ್ರಿಸ್ತನ ಮುಖಾಂತರ ದೇವರು ನ್ಯಾಯತೀರಿಸುವ ದಿವಸದಲ್ಲಿ ಅವರು ತೀರ್ಪು ಹೊಂದುವರು.

ಮನುಕುಲ ಈ ಒತ್ತಡವನ್ನು ನಿಭಾಯಿಸಲು ಹೋರಾಡಿತ್ತು. ಸಿದ್ಧಾಂತಗಳ ಭ್ರಮೆಯ ಧಾರ್ಮಿಕ ಸಂಭಾಷಣೆಯನ್ನು ರೂಪಿಸುವ ಮೂಲಕ, ಶುಚಿತ್ವದ ಹಾದಿಯಲ್ಲಿ ಹೊಸ ಭರವಸೆಯ ಬೆಳಕನ್ನು ಹುಡುಕುವ ಪ್ರಯತ್ನ ಸಾಗಿದೆ. ನಡುವೆ, ವಿರೋಧಿಸುವ, ಆಸ್ತಿಕ ಭಾವದ ಮನೋವಿಕೃತರು ಇದನ್ನು ಸ್ವಂತ ಸಂಗತಿಯನ್ನಾಗಿಸಿ, ಹೊರಬರಲು ಒಪ್ಪುತ್ತಿಲ್ಲ. ಅವರ ನಂಬಿಕೆಯ ಪ್ರಕಾರ, ಧರ್ಮವೇ ಪ್ರಧಾನವಾಗಿದ್ದು, ದುರ್ಬಲ ಮನಸ್ಸಿನ ವ್ಯಕ್ತಿಗಳು, ಫ್ರಾಯ್ಡ್ ನರವ್ಯಾಧಿಗೆ ತುತ್ತಾಗಿ ಇದನ್ನು ನಂಬುವಂತಹ ಪರಿಸ್ಥಿತಿಯಲ್ಲಿರುತ್ತಾರೆ. ಆಸಕ್ತಿದಾಯಕ ವಿಷಯವೇನೆಂದರೆ, ಮನುಕುಲ ಈ ವಿಚಾರದ ಕುರಿತು ತಮ್ಮದೇ ಆದ ಪ್ರಾಯಶ್ಚಿತಗಳನ್ನು ಕಂಡುಕೊಂಡಿದ್ದು, ಸೃಷ್ಟಿಕರ್ತನಿಗೆ ವಿನಯಪೂರ್ಣ ಮನವಿ ಸಲ್ಲಿಸುವುದನ್ನು ತಮ್ಮದೇ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ.

ಈ ಜಂಜಾಟಗಳಿಗೆ ಪ್ರತಿಕ್ರಿಯೆಯ ರೂಪವಾಗಿ, ವ್ಯಕ್ತಿಗೆ ಅನುಗುಣವಾಗಿ ಪರಿಹಾರವನ್ನು ಒದಗಿಸುವ ಕ್ರಮವನ್ನು ಸೂಚಿಸಲು ಇಚ್ಛಿಸುತ್ತೇನೆ. ಯೇಸುಕ್ರಿಸ್ತನ ಹೊತ್ತಿಗೆಗಳು, ಇತರೆ ಮನುಕುಲದಲ್ಲಿರುವ ಹಾಗೆ ದೇವನನ್ನು ಹುಡುಕುವ, ಭಿನ್ನವಿಸಿಕೊಳ್ಳುವ ಹಾಗೂ ತಲುಪುವ ಮಾರ್ಗವಲ್ಲ, ಬದಲಾಗಿ ಮಾನವೀಯತೆ, ನಂಬಿಕೆಗಳ ಆಧಾರದಲ್ಲಿ ದೇವನೇ ಮನಷ್ಯರನ್ನು ಪಡೆಯುವುದಾಗಿದೆ. ಇದು ಬಲ, ದುರ್ಬಲ, ವ್ಯಕ್ತಿಯೊಬ್ಬರ ಸಾಮರ್ಥ್ಯವನ್ನು ಆಧರಿಸಿ ಅಲ್ಲ, ಬದಲಾಗಿ, ಶುಚಿತ್ವ ಹಾಗೂ ಶುದ್ಧತೆಗಳು ದೇವನಿಂದ ಉಡುಗೊರೆಯಾಗಿ ಪಡೆಯಬಹುದು. ಅದಕ್ಕಾಗಿ ನೀವು ಆತನ ಅನುಯಾಯಿಯಾಗಿ, ಆತನನ್ನು ಅನುಸರಿಸಿದರೆ ಸಾಕು.

ತೀತನಿಗೆ 3:5
5 ನಾವು ಮಾಡಿದ ನೀತಿಯ ಕ್ರಿಯೆ ಗಳಿಂದಲ್ಲ, ಆತನ ಕರುಣೆಯಿಂದಲೇ ಪುನರ್ಜನ್ಮದ ತೊಳೆಯುವಿಕೆಯಿಂದಲೂ ಪವಿತ್ರಾತ್ಮನು ನೂತನ ಸ್ವಭಾವವನ್ನುಂಟು ಮಾಡುವದರಿಂದಲೂ ಆತನು ನಮ್ಮನ್ನು ರಕ್ಷಿಸಿದನು.

ರೋಮಾಪುರದವರಿಗೆ 6:23
23 ಯಾಕಂದರೆ ಪಾಪದ ಸಂಬಳ ಮರಣ. ಆದರೆ ದೇವರ ದಾನವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ನಿತ್ಯಜೀವವು.

ಎಸ್ಪಿಯನ್ಸ್ 2:8-9
8 ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ, 9 ಅದು ಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದ ವಿಲ್ಲ..

1 ಯೋಹಾನನು 1:7
7 ಆತನು ಬೆಳಕಿನಲ್ಲಿರು ವಂತೆಯೇ ನಾವೂ ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ; ಆತನ ಮಗನಾದ ಯೇಸುಕ್ರಿಸ್ತನ ರಕ್ತವು ನಮ್ಮನ್ನು ಸಕಲ ಪಾಪದಿಂದ ಶುದ್ಧಿಮಾಡುತ್ತದೆ.

1 ಯೋಹಾನನು 1:9
9 ನಾವು ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿ ಮಾಡುವನು..

ವಾಟರ್ ಬ್ಯಾಪ್ಟಿಸಂ ಅಂತಹ ಪ್ರಾಯಶ್ಚಿತ ಕ್ರಮಗಳನ್ನು ಉದಾಹರಿಸಿ, ಕ್ರೈಸ್ತ ಧರ್ಮ ಕೂಡ ಉಳಿದ ಯಾವುದೇ ಧರ್ಮಗಳಿಗಿಂತ ಭಿನ್ನವಲ್ಲ ಎಂದು ನೀವು ಪ್ರಶ್ನಿಸಬಹುದು. ಮೊದಲನೆಯದಾಗಿ ನಾನು ಇದನ್ನು ಒಪ್ಪಿಕೊಳ್ಳುತ್ತೇನೆ. ಈ ರೀತಿ ಸ್ನಾನದ ಮೂಲಕ ಪ್ರಾಯಶ್ಚಿತ ಪಡೆಯುವವರು, ಚರ್ಚಿನ ಅನುಯಾಯಿಗಳೆಂದು ಕರೆಯಿಸಿಕೊಳ್ಳುವ ಹುಸಿಭಕ್ತರು. ಬ್ಯಾಪ್ಟಿಸಂನ ನಿಜಾರ್ಥವೇನೆಂದರೆ, ಇದು ನಂಬಿಕೆಯ ಕೇಂದ್ರ, ಪ್ರಾಥಮಿಕವಾಗಿ ಇದು ಶುಚಿತ್ವದ ಅದ್ಭುತ ಚಿಹ್ನೆಯಾಗಿ ಗೋಚರಿಸುತ್ತದೆ. ಇದು ಸರಿಯಾದ ರೀತಿಯಲ್ಲಿ ಯೇಸುಕ್ರಿಸ್ತನ ದೇಹದ ರಕ್ತದ ಕಣಗಳಂತೆ, ತನ್ನನ್ನು ನಂಬಿದವರನ್ನು ಪರಿಶುದ್ಧರನ್ನಾಗಿಸುತ್ತದೆ. ನ್ಯಾಯಯುತವಾಗಿ ಪರಿಶುದ್ಧತೆಯ ಮೂಲಕ ಅವರನ್ನು ಬದಲಾಯಿಸಿ, ಹೊಸ ಜೀವನಪಥವನ್ನು ನೀಡುತ್ತದೆ. ಈ ವಾಟರ್ ಬ್ಯಾಪ್ಟಿಸಂ ನೈಜತೆಗೆ ಸಾಕ್ಷಿಯಾಗಿದ್ದು, ಇದು ಜಲಜನಕ ಹಾಗೂ ಆಮ್ಲಜನಕಗಳ ಸಂಯೋಜನೆಗಳ ಸ್ವರೂಪವಲ್ಲ. ಇದು ಯೇಸುಕ್ರಿಸ್ತನ, ಜೀವನ ಕ್ರಮದ ಪರಿಪಾಠವಾಗಿದ್ದು, ಈ ಪವಿತ್ರತೆ, ಜೀವಂತ ನೀರಿನಿಂದ, ಒಬ್ಬ ವ್ಯಕ್ತಿಯ ಕೊಳೆಯನ್ನು ದೂರವಾಗಿಸಿ, ಆತನ ಹೃದಯ ಹಾಗೂ ಜೀವನವನ್ನು ಪರಿವರ್ತಿಸುತ್ತದೆ. ದೇವನು ತಾನಾಗಿಯೇ ನಿಮಗೆ ಬಿಡುಗಡೆಯ ಉಡುಗೊರೆಯನ್ನು ನೀಡುತ್ತಾನೆ. ಮತ್ತು ಈ ಪವಿತ್ರ ಶಕ್ತಿಯನ್ನು ಮನುಷ್ಯ ಶುದ್ಧಿಕರಿಂದ ನೀಡಲು ಸಾಧ್ಯವಿಲ್ಲ. ಆದ್ದರಿಂದ, ವಾಟರ್ ಬ್ಯಾಪ್ಟಿಸಂ ದೇವನ ಶಕ್ತಿಯಾಗಿದ್ದು, ಸ್ವರ್ಗದ ಇರುವಿಕೆಯಿಂದ ಕೂಡಿದೆ. ಈ ಗರ್ಭದ ಕಾಲಚಕ್ರದಲ್ಲಿ ಇದು ವ್ಯಕ್ತಿಯೊಬ್ಬನಿಗೆ ಹೊಸಹುಟ್ಟು ನೀಡುವುದಾಗಿದೆ. ಧಾರ್ಮಿಕ ಚಟುವಟಿಕೆಗಳನ್ನು ಮಾಡಲು ಮಾನವನಾಗಿ ಹುಟ್ಟು ಪಡೆಯುವುದಲ್ಲ, ಬದಲಾಗಿ, ದೇವರಿಂದ ಸೃಷ್ಟಿಸಲ್ಪಟ್ಟ, ಪವಿತ್ರ ಶಕ್ತಿಯಾದ ಯೇಸುಕ್ರಿಸ್ತನಿಂದ ಮರುಹುಟ್ಟು ಪಡೆಯುವ ಪ್ರಕ್ರಿಯೆ. ಈ ಹೊಸಹುಟ್ಟನ್ನು ಹಿಂದೂ ಅಥವಾ ಬೌದ್ಧ ಧರ್ಮದ ಮರುಹುಟ್ಟು ಅಥವಾ ಪುನರ್ಜನ್ಮದೊಂದಿಗೆ ತುಲನೆ ಮಾಡಬೇಕಿಲ್ಲ. ಇದು ಪವಿತ್ರ ಶಕ್ತಿಯಿಂದ ಸಂಯೋಜಿತವಾಗಿ ಯೇಸುಕ್ರಿಸ್ತನಿಂದಲೇ, ನಡೆಯುವ ಕೆಲಸವಾಗಿದೆ. ಆತನ ಕೆಲಸಗಳನ್ನು ಬಿಡುಗಡೆಯ ಮಾರ್ಗವಾಗಿ, ನಂಬಿಕೆ ಹಾಗೂ ಸಮರ್ಪಿತ ಭಾವದಿಂದ ನೋಡಬೇಕು.

ಹೆಬ್ರಾಯಿಕ್ ಪ್ರವಾದಿ ಯೆಹೆಜ್ಯೇಲನು 36:25-27 ಪ್ರಕಾರ ಇಸ್ರೇಲ್‌ನ ಭವಿಷ್ಯ ಪಾಪವಿಮೋಚನೆಯ ಆಧಾರದಲ್ಲಿ ಪವಿತ್ರಗ್ರಂಥವು ಈ ವಾಸ್ತವವನ್ನು ಹೋಲಿಸುತ್ತದೆ.

25 ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ; ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು. 26 And ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ. 27 ನನ್ನ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನೀವು ನನ್ನ ನಿಯಮ ಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಅನುಸರಿಸಿ ನಡೆಯುವಿರಿ.

ಟೇಬರ್‌ನೇಕಲ್ಸ್ ಫೀಸ್ಟ್ ಅಥವಾ ಸಕ್ಕಟ ಇನ್ ವೇಳೆ ರಬ್ಬಿ ಯಶುವ ಈ ರೀತಿಯಾಗಿ ಹೇಳಿದ್ದರು.

ಯೋಹಾನನು 7:37-39
37 ಹಬ್ಬದ ಆ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು–ಯಾವನಿಗಾದರೂ ನೀರಡಿಕೆ ಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. 38 ನನ್ನ ಮೇಲೆ ನಂಬಿಕೆ ಇಡುವವನಿಗೆ ಬರಹವು ಹೇಳಿದ ಪ್ರಕಾರ ಆತನ ಹೊಟ್ಟೆಯೊಳಗಿಂದ ಜೀವ ಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು.’” 39 ಆದರೆ ಆತನು ತನ್ನಲ್ಲಿ ವಿಶ್ವಾಸವಿಡುವವರು ಹೊಂದಲಿರುವ ಆತ್ಮನನ್ನು ಕುರಿತು ಇದನ್ನು ಹೇಳಿದನು; ಯಾಕಂದರೆ ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ್ದರಿಂದ ಪವಿತ್ರಾ ತ್ಮನು ಇನ್ನೂ ಕೊಡಲ್ಪಟ್ಟಿರಲಿಲ್ಲ.

ಪ್ರಾಚೀನ ಕಾಲದಲ್ಲಿ ಯಹೂದಿಗಳು ತಮ್ಮ ದೇವರಿಗೆ ಅತ್ಯುತ್ತಮ ಸಾಂಪ್ರದಾಯಿಕ ಕರ್ತವ್ಯಗಳನ್ನು ಮಾಡುವುದ್ ಮೂಲಕ ಅಲ್ಪಕಾಲಿಕ ತೃಪ್ತಿ ಹೊಂದುತ್ತಿದ್ದರು. ಆದರೆ ಹೀಬ್ರು 10 ಉಲ್ಲೇಖಿಸಿರುವಂತೆ, ಇವು ಕೇವಲ ಚಿಹ್ನೆಗಳಾಗಿತ್ತೆ ವಿನಃ ನಿಜವಾದ ಪ್ರಕ್ರಿಯೆ ಆಗಿರಲಿಲ್ಲ. ನಮ್ಮ ಕೊಳಯೆನ್ನು ತೊಳೆಯಲು ಕ್ರಿಸ್ತನಿಗೆ ಒಮ್ಮೆ ಅರ್ಪಣೆ ಸಲ್ಲಿಸಲಾಯಿತು ಮತ್ತು ಜಗತ್ತಿನ ಪಾಪವನ್ನು ತೊಳಯುವ ಕರ್ತನಿಗೆ ಸಾರ್ವಕಾಲಿಕ ತ್ಯಾಗದ ಪ್ರತೀಕವಾಗಿ ‘ದೇವರ ಕುರಿಮರಿ’ಯನ್ನು ಅರ್ಪಿಸಲಾಗುವುದು. ಯಹೂದಿಗಳು ಇಂದು ತಮ್ಮನ್ನು ತ್ಯಾಗ ಮಾಡಬೇಕಿಲ್ಲ ಬದಲಾಗಿ ಪ್ರಾರ್ಥನೆಯ ವಿಧಾನಗಳು, ಉಪವಾಸ, ಒಳ್ಳೆಯ ನಡತೆಗಳು ಸಾಕಾಗುವುದು. ಟೋರಾಗೆ ಸಂಬಂಧಿಸಿದ ಬರವಣಿಗೆಯ ಪದಗಳನ್ನು ವಿರೋಧಿಸಿ ದಂಗೆಯೇಳುವುದು ಸಮಾಧಾನಕರವೇ?

ಲೆವಿಡಿಕಸ್ 17:11
11 ಯಾಕಂದರೆ ಪ್ರತಿ ದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮ ಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರ ವಾಗಿರುವ ಕಾರಣ ಅದರಿಂದ ದೋಷಪರಿಹಾರ ವಾಗುತ್ತದಷ್ಟೆ.

ನೀವು ಎಷ್ಟು ಮಿಟ್ಸೋವ್ಟ್ ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವು ಸಾಕಾಗುವಷ್ಟು ಮಾಡಿದ್ದೀರಿ ಎಂಬುದಕ್ಕೆ ಏನು ಪುರಾವೆಯಿದೆ? ತಾತ್ಕಾಲಿಕ ತ್ಯಾಗಕ್ಕಿಂತ ಮಿಗಿಲಾಗಿ ಮೆಸಯ್ಯದ ಮೂಲಕ ದೇವರ ದಯೆ ಮತ್ತು ಕರುಣೆಗಳ ಮಹಾತ್ಯಾಗದ ಮುಂದೆ ನಿಮ್ಮ ಪಾಪಗಳು ಮರೆತುಹೋಗಿವೆಯೇ?ಮೆಸಯ್ಯ ಇನ್ ಇಸಯ್ಯ 53.?

ಅದೇ ರೀತಿ ಯೇಸುಕ್ರಿಸ್ತನ ಮರಣವನ್ನು ಒಪ್ಪಿಕೊಳ್ಳದ ನನ್ನ ಮುಸ್ಲಿಂ ಸ್ನೇಹಿತರು, ಅದನ್ನು ಪ್ರವಾದಿಗಳ ಕಚೇರಿಯ ವಿಫಲತೆಗೆ ಹೋಲಿಸಿ, ಇಡೀ ವಿಚಾರದಲ್ಲಿ ಮೆಸಯ್ಯದ ಮುಖೇನ ಅಬ್ರಾಹಮಿಕ್ ವಿಧಾನದ ಪರ್ಯಾಯ ಸಮನ್ವಯವನ್ನು ನೀಡುವ ದೇವನ ಮಹತ್ತರ ಚಿಂತನೆಯ ವಿಚಾರವನ್ನು ಎಲ್ಲರೂ ಮರೆತಿದ್ದಾರೆ. ಆತನ ತಾತ್ಕಾಲಿಕ ನಾಚಿಕೆ, ಅವಮಾನಗಳನ್ನು ಸಹಿಸಿಕೊಂಡು ಇಂದಿನ ಸಂತಸ, ಸಂಭ್ರಮಗಳಿಗೆ ಕ್ರಾಸ್ ದ್ಯೋತಕವಾಗಿ ಮಹೋನ್ನತ ವೈಭೋಗದಲ್ಲಿ ಮುಂದುವರಿಯುತ್ತಿದೆ. ಹೀಬ್ರು 2:9-18; 12:2.

jesusandjews.com/wordpress/2011/07/14/crucifixion-of-jesus-christ-and-islam/

ಯೇಸುಕ್ರಿಸ್ತ ಜೀವನದ ನೀರನ್ನು ನೀಡಬಲ್ಲ, ಅದು ನಿಮ್ಮನ್ನು ಪರಿಪೂರ್ಣವಾಗಿ ಸಮಾಧಾನ ಪಡಿಸಿ, ಆತ್ಮವನ್ನು ಪರಿಶುದ್ಧಗೊಳಿಸುವುದು ಮತ್ತು ಆತ ಸ್ವರ್ಗದ ಪಿತಾಮಹನಾಗಿದ್ದರೂ ಕೂಡ ನಿಮಗೆ ಆತ ಮಾರ್ಗದರ್ಶನ ನೀಡುತ್ತಾನೆ. ಕೊನೆಯದಾಗಿ ನಾನು ಹೇಳಲು ಇಚ್ಛಿಸುವುದೇನೆಂದರೆ, ಸಮರಿಟನ್ ಮಹಿಳೆಯಂತೆ, ನಿಮ್ಮ ಆಧ್ಯಾತ್ಮಿಕ ದಾಹವನ್ನು ತಣಿಸಲು ಈ ಜೀವನದ ನೀರನ್ನು ಕೇಳಬೇಕು. ನಿಮ್ಮನ್ನು ಮೋಸಗೊಳಿಸುವ ಹಾಗೂ ದಾಹದಿಂದಲೇ ಬದುಕುವಂತೆ ನಿರ್ದೇಶಿಸುವ ಸುಳ್ಳು ಧರ್ಮಗಳ, ಭಕ್ತಿ ಮತ್ತು ತತ್ವಗಳನ್ನು ಮೀರಿ ನೀವು ಈ ಜೀವನ ಚೈತನ್ಯವನ್ನು ಪಡೆಯಬೇಕು.

ಯೋಹಾನನು 4:10, 13-14
10 ಯೇಸು ಪ್ರತ್ಯುತ್ತರವಾಗಿ ಆಕೆಗೆ–ದೇವರ ದಾನವೇನೆಂಬದೂ ಮತ್ತು–ನನಗೆ ಕುಡಿಯುವದಕ್ಕೆ ಕೊಡು ಎಂದು ನಿನ್ನನ್ನು ಕೇಳಿದಾತನು ಯಾರೆಂಬದೂ ನಿನಗೆ ತಿಳಿದಿದ್ದರೆ ನೀನು ಆತನನ್ನು ಕೇಳುತ್ತಿದ್ದಿ, ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು ಎಂದು ಹೇಳಿದನು” 13 ಯೇಸು ಪ್ರತ್ಯುತ್ತರವಾಗಿ ಆಕೆಗೆ–ಈ ನೀರನ್ನು ಕುಡಿಯುವ ಪ್ರತಿಯೊಬ್ಬನಿಗೆ ತಿರಿಗಿ ನೀರಡಿಕೆಯಾಗುವದು 14 ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ಎಂದಿಗೂ ನೀರ ಡಿಕೆಯಾಗುವದಿಲ್ಲ; ಯಾಕಂದರೆ ನಾನು ಅವನಿಗೆ ಕೊಡುವ ನೀರು ಅವನಲ್ಲಿ ನಿತ್ಯಜೀವಕ್ಕೆ ಉಕ್ಕುವ ನೀರಿನ ಬಾವಿಯಾಗಿರುವದು ಅಂದನು.”

ಕೊನೆಯದಾಗಿ ಏಸುವು ನಿಮ್ಮನ್ನು ಆಮಂತ್ರಿಸುತ್ತಾರೆ!

ಮತ್ತಾಯನು 11:28-30
28 ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು 29  ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.30 ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು.”

 

 

ದೇವರೊಂದಿಗೆ ಸಂಬಂಧವನ್ನು ಹೊಂದುವುದು ಹೇಗೆ

ಹಿಂದೂ ಸಂಪನ್ಮೂಲಗಳು

ಕನ್ನಡ-Kannada

Ritual cleansing and purification

Leave a Reply