ಹಿಂದುತ್ವದ ದೇವರುಗಳು?

ಹಿಂದೂ ಧರ್ಮದಲ್ಲಿ ದೇವರ ಪರಿಕಲ್ಪನೆ ಕುರಿತು ಒಬ್ಬ ಮನುಷ್ಯನಿಗೆ ವಿವಿಧ ದೃಷ್ಟಿಗಳಿವೆ. ಆತನ ನಂಬಿಕೆ ದೇವರೇ ಇಲ್ಲ ಎಂಬಲ್ಲಿಂದ, ಒಬ್ಬ ದೇವರು ಎಂಬಲ್ಲಿಗೆ, ಅಲ್ಲಿಂದ, ತುಂಬಾ ದೇವರು ಅಂದರೆ 33ಕೋಟಿ ದೇವರು ಎಂಬಲ್ಲಿಗೆ ತಲುಪುತ್ತದೆ. ದೇವ(ರು) ಕುರಿತಾದ ಈ ವೈವಿಧ್ಯಮಯ ವಿಚಾರದಲ್ಲಿ ದೈವಾಂಶ ಸಂಭೂತನ ಲಕ್ಷಣಗಳ ಕುರಿತು ಬಹುವಿಧದ ಆಯಾಮಗಳು ಸಿಗುತ್ತವೆ. ಇದು ಏಕತತ್ವವಾದ, ಅದ್ವೈತವಾದ, ವೈಷ್ಣವವಾದ ಹಾಗೂ ಸರ್ವಸಜೀವತ್ವಾದವನ್ನು ಒಳಗೊಂಡಿರುತ್ತದೆ.

ದೇವರ ಕುರುಹಿಗಾಗಿ ಈ ನಂಬಿಕೆಗಳನ್ನು ಪರಿಶೀಲಿಸಿದಾಗ, ಈ ವಿಚಾರಗಳ ಕುರಿತ ಲೆಕ್ಕಾಚಾರಗಳು ಅಸಂಬದ್ಧವಾಗಿರುವ ವಿವಾದಗಳನ್ನು ಸ್ಪಷ್ಟವಾಗಿ ಗ್ರಹಿಸಬಹುದು. ಆದ್ದರಿಂದ, ಇಂತಹ ಬಹುಸ್ವರೂಪಿ ದೃಷ್ಠಿಕೋನವನ್ನು ಸ್ವೀಕರಿಸುವುದೆಂದರೆ, ಹಿಂದೂ ಸಮಾಜದಲ್ಲಿ ಸಂಘಟನೆ ಮಾಡುವುದು ಅಥವಾ ಸರಿಹೊಂದಿಸುವುದು. ಇಲ್ಲಿ ‘ಎ’ ಅಥವಾ ‘ಎ’ ಅಲ್ಲದಿರುವುದು ಎರಡೂ ಕೂಡ ಲೆಕ್ಕಾಚಾರದಲ್ಲಿ ಸರಿ ಅಥವಾ ಸಮರ್ಪಕ, ಹೇಗೆಂದರೆ ವಾಸಯೋಗ್ಯವಲ್ಲದ ಮತ್ತು ಬಾಳಲಾಗದಂತಹ ವಿಚಾರದ ಆಧಾರಕ್ಕೆ ದೇವರು ಬರುತ್ತಾನೆ. ಧಾರ್ಮಿಕ ನಂಬಿಕೆ ಮಾತ್ರವಲ್ಲದೆ, ಒಬ್ಬ ತನ್ನ ದಿನಚರಿಯಲ್ಲಿ ಜಾತ್ಯಾತೀತ ಬದುಕನ್ನು ನೈಜತೆಯ ಬಯಕೆಯೊಂದಿಗೆ, ಕಾನೂನಿನ ಕಾರಣವನ್ನು ನೀಡುತ್ತಾ ಹೇಗೆ ಜೀವನ ಮಾಡುತ್ತಾನೆ ಎಂಬುದನ್ನು ಅರಿಯಬಹುದು.

ಬುಡಕಟ್ಟು ಜನಾಂಗದ ನಂಬಿಕೆಯಲ್ಲಿ, ಪೌರಾಣಿಕ ಹಿನ್ನಲೆಯಲ್ಲಿ ಅಥವಾ ಐತಿಹಾಸಿಕ ಚರಿತ್ರೆಯಲ್ಲಿ ಹಿಂದೂ ಧರ್ಮದ ದೇವರುಗಳನ್ನು ಕೂರಿಸಲಾಗಿದೆ. ಈ ಕಾರಣಕ್ಕಾಗಿ ಹಿಂದೂ ಧರ್ಮದ ದೇವರ ಪರಿಕಲ್ಪನೆಯನ್ನು ರುಜುವಾತು ಮಾಡಲಾಗದು ಅಥವಾ ದಂತಕತೆಗಳ ಮೂಲಕ, ನಂಬಿಕೆ ಹಾಗೂ ಮೂಢನಂಬಿಕೆಗಳ ತಳಹದಿಯಲ್ಲಿ ಅದರ ಅಸ್ತಿತ್ವ ಇರುವುದರಿಂದ, ಅದನ್ನು ಸ್ವೀಕರಿಸಲಾಗುವ ವಿಷಯ ಎಂದು ಒಪ್ಪಿಕೊಳ್ಳಲಾಗದು. ಧಾರ್ಮಿಕ ವಿಚಾರಗಳ ನೀತಿಕತೆಗಳು, ಜನಪದ ಹಿನ್ನಲೆ ಹೊಂದಿರದ, ಇಂದು ನಗಣ್ಯವಾಗಿರುವ ಈಜಿಪ್ಟ್, ಗ್ರೀಕ್, ರೋಮನ್ ಮತ್ತು ಜರ್ಮನಿ ಅಥವಾ ಸ್ಲಾವಿಕ್ ನಾಗರಿಕತೆಗಳ ಇತರೆ ಪುರಾತನ ಧರ್ಮಗಳ ಜೊತೆಯಲ್ಲಿ ಹಿಂದೂ ಧರ್ಮವನ್ನು ತುಲನೆ ಮಾಡಿ ಇದನ್ನು ರುಜುವಾತು ಮಾಡಬಹುದು.

ದೇವರ ಪುರಾಣಗಳು ಭಾವನಾತ್ಮಕವಾಗಿ ಶಕ್ತಿಯುತವಾಗಿದ್ದು, ಜನರನ್ನು ಸಂಪರ್ಕಿಸುವ ಒಂದು ವಿಸ್ಮಯದೊಂದಿಗೆ, ಇತರರನ್ನು ಸಂಪ್ರದಾಯ, ಸಾಂಸ್ಕೃತಿಕ ಪರಿಸರದಲ್ಲಿರುವ ಕೆಲವು ಪ್ರಮುಖ ಅಲೌಕಿಕ ನೈಜತೆಯನ್ನು ಕರ್ತವ್ಯದ ಪ್ರಜ್ಞೆಯ ಹೆಸರಿನಲ್ಲಿ ಇದು ಆಕರ್ಷಿಸುತ್ತವೆ. ಕಾಲ ಸರಿದಂತೆ, ಇವೆಲ್ಲ ವಿಶ್ವಾಸಾರ್ಹವಲ್ಲದ, ಕಾಲ್ಪನಿಕ, ಅತಾರ್ಕಿಕ ಎಂದು ನಿರೂಪಿತವಾಗಿದ್ದರೂ, ಧರ್ಮದ ಅಧಿಕಾರವಾಣಿಯಿಂದ, ವ್ಯಕ್ತಿ, ಕುಟುಂಬ, ಕುಲ ಹಾಗೂ ದೊಡ್ಡಮಟ್ಟದಲ್ಲಿ ಸಮಾಜದ ಮೇಲೆ ಪರಿಣಾಮ ಬೀರಿವೆ. ಈ ನಂಬಿಕೆಗಳು ಇಂದು ಕೂಡ ಜೀವಂತವಾಗಿರಲು ಅಥವಾ ಅಸ್ತತ್ವದಲ್ಲಿರಲು ಸಮಾಜದಲ್ಲಿ ಬೀಡುಬಿಟ್ಟಿರುವ ಹಲವಾರು ಅಂಶಗಳು ಗೋಚರಿಸುತ್ತವೆ. ಈ ನಂಬಿಕೆಗಳೇ ನಮ್ಮ ಅಸ್ತಿತ್ವ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಎಂಬ ಮೌಢ್ಯತೆ ಜನರಲ್ಲಿದೆ. ಇದೇ ಅವರಿಗೆ ಭದ್ರತೆ ನೀಡುತ್ತದೆ ಎಂಬ ಹುಸಿ ಭಾವನೆ ಅವರಲ್ಲಿದೆ. ಇಂತಹ ಹಲವಾರು ಉದಾಹರಣೆಗಳನ್ನು ಕ್ರೀಡಾ ತಂಡಗಳಲ್ಲಿ, ರಾಜಕೀಯ ಪಕ್ಷಗಳಿಗೆ ಜನರು ತಮ್ಮನ್ನು ತಾವೇ ಸಮರ್ಪಿಸಿಕೊಂಡು, ಅದು ಎಂತಹುದೇ ಆಗಿರಲಿ ತಮ್ಮ ತಂಡ ಅಥವಾ ಪಕ್ಷವನ್ನು ಬಹಳವಾಗಿ ನಂಬುವ ಮನಸ್ಥಿತಿಯಲ್ಲಿರುತ್ತಾರೆ. ನಾಜಿಯಿಸಂ ದೃಷ್ಠಿಯಲ್ಲಿ ಸಂಸ್ಕೃತಿ ಹಾಗೂ ಸಮಾಜವನ್ನು ತಮ್ಮ ಜೀವನ ಸಿದ್ಧಾಂತಕ್ಕೆ ಬೇಕಾದಂತೆ ತಿರುಚಿದಂತೆ, ಇದು ಕೂಡ ವಂಚನೆಯಾಗಿದೆ. ಆದ್ದರಿಂದ ತತ್ವಶಾಸ್ತ್ರದ ಪ್ರಕಾರ ಎಲ್ಲರೂ ತಪ್ಪಾಗಿರಲು ಸಾಧ್ಯ, ಆದರೆ ಎಲ್ಲರೂ ಸರಿಯಾಗಿರಲು ಖಂಡಿತಾ ಸಾಧ್ಯವಿಲ್ಲ.

ಹೆಚ್ಚಿನ ಜನರಿಗೆ ತಮ್ಮ ದೇವರ ಪರಿಕಲ್ಪನೆಯಲ್ಲಿ ಅಭಾಸವಿರುವುದನ್ನು ಯೋಚಿಸಲೂ ಸಾಧ್ಯವಿಲ್ಲ. ಅದನ್ನು ಅವಲೋಕಿಸುವ, ಸಮರ್ಥಿಸುವ ಸಾಮರ್ಥ್ಯವೂ ಅವರಲಿಲ್ಲ. ಆದ್ದರಿಂದ,
ಇತರರು ಈ ವಿಚಾರವನ್ನು ಸಮರ್ಥಿಸಿದಾಗ, ತಮ್ಮ ಗೌರವದ ವಿಷಯದಲ್ಲಿ ಅದನ್ನು ಒಪ್ಪಿಕೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಇನ್ನು ನನ್ನ ಹಿಂದೂ ಸ್ನೇಹಿತರ ನನ್ನ ಕಾಳಜಿಯಿಷ್ಟೆ. ಸಂಸ್ಕೃತಿಯ ಗಡಿಯನ್ನು, ಸಾಮಾಜಿಕ ನೀತಿ-ನಿಯಮಗಳನ್ನು, ವಸ್ತುವನ್ನು ಆಧರಿಸಿದ ಜನಪ್ರೀಯತೆಗೆ ಅವಕಾಶ ನೀಡಬೇಡಿ. ಅದರ ಬದಲಾಗಿ, ಜೀವನದ ಮತ್ತೊಂದು ಮಗ್ಗುಲಿಗೆ ಸಾಗಿಸಿದರೂ, ಬದುಕಿನಲ್ಲಿ ಸತ್ಯಕ್ಕೆ ಮಾತ್ರ ಜಾಗ ನೀಡಿ. ಸತ್ಯದ ಹಾದಿಯಲ್ಲಿ ನಡೆಯಿರಿ. ಈ ಹಾದಿಯಲ್ಲಿ ಒಂಟಿಪ್ರಯಾಣ ಮಾಡಬೇಕಾಗಿ ಬಂದರೂ ಚಿಂತೆಯಿಲ್ಲ, ಹೆದರದಿರಿ. ಸತ್ಯಾನ್ವೇಷಣೆಯಲ್ಲಿ ಎದೆಗುಂದದಿರಿ. ಇಲ್ಲದಿದ್ದಲ್ಲಿ, ಸರಿಯಾಗಿ ನಿರ್ದೇಶನ ನೀಡದ, ನಾಶವಾಗುವ ತಪ್ಪುದಾರಿಯಲ್ಲಿ ನೀವು ಸಾಗುವಿರಿ.

ಮತ್ತಾಯನು 7:13-14
13 “ಇಕ್ಕಟ್ಟಾದ ದ್ವಾರದೊಳಗೆ ನೀವು ಪ್ರವೇಶಿಸಿರಿ; ಯಾಕಂದರೆ ನಾಶನಕ್ಕೆ ನಡಿಸುವ ದ್ವಾರವು ಅಗಲವೂ ಮಾರ್ಗವು ವಿಶಾಲವೂ ಆಗಿದೆ. ಅದರೊಳಗೆ ಪ್ರವೇಶಿಸುವವರು ಬಹು ಜನ.. 14 ಜೀವಕ್ಕೆ ನಡಿಸುವ ದ್ವಾರವು ಇಕ್ಕಟ್ಟಾದದ್ದೂ ದಾರಿಯು ಬಿಕ್ಕಟ್ಟಾದದ್ದೂ ಆಗಿದೆ; ಆದದರಿಂದ ಅದನ್ನು ಕಂಡುಕೊಳ್ಳುವವರು ಸ್ವಲ್ಪ ಜನ..

ಕೊನೆಯದಾಗಿ, ಈ ನೇರ ಹಾಗೂ ನಿಷ್ಪಕ್ಷಪಾತ ಬರಹದ ಮೂಲಕ, ನಿಮಗೆ ಅಸಮಧಾನ ಮಾಡಿಲ್ಲ ಎಂದು ನಾನು ಭಾವಿಸಿದ್ದೇನೆ. ಭಕ್ತಿ ಹಾಗೂ ಪಾವಿತ್ರ್ಯ ನಂಬಿಕೆಯನ್ನು ಹೆಚ್ಚಿನವರು ಎತ್ತಿ ಹಿಡಿಯುತ್ತಾರೆ ಎಂಬುದನ್ನು ನಾನು ತಿಳಿದಿದ್ದೇನೆ. ನೀವು ಅದರಲ್ಲಿ ಗಂಭೀರವಾಗಿ ಆಸಕ್ತಿದಾಯಕರಾಗಿರಬಹುದು. ಆದರೆ ಇದು ಗಂಭೀರವಾಗಿ ತಪ್ಪು ಮತ್ತು ಈ ಸಂದರ್ಭದಲ್ಲಿ ನನ್ನ ಹಿಂದೂ ಸ್ನೇಹಿತರಿಗೆ ಪ್ರೀತಿಯಿಂದಲೇ ಸವಾಲೊಡ್ಡುತ್ತಿದ್ದೇನೆ.

ಮುಗಿಸುವಾಗ, ದೇವರ ಕುರಿತು ನಿಮ್ಮಲ್ಲಿ ಸಂಶಯ ಉಳಿಯಲು ನಾನು ಬಯಸುವುದಿಲ್ಲ. ನಾನು ನಿಮಗೆ ಆಮಂತ್ರಣ ನೀಡಲು ಬಯಸುತ್ತೇನೆ. ಆಧ್ಯಾತ್ಮಿಕ ತೊಂದರೆಗಳಿಂದ ಬಳಲುತ್ತಿರುವ ನಿಮಗೆ ಹೆಗಲು ನೀಡುವ “ಒಬ್ಬ”ನಲ್ಲಿ ನೀವು ವರಮಿಸಿ. ದೇವರು ಆಶೀರ್ವದಿಸಲಿ!

ಮತ್ತಾಯನು 11:28-30ಪ್ರಕಾರ ಯೇಸುವು ಹೇಳಿದ್ದಾರೆ
28  ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು. 29 ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.30 ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ.”

 

 

ದೇವರೊಂದಿಗೆ ಸಂಬಂಧವನ್ನು ಹೊಂದುವುದು ಹೇಗೆ

ಹಿಂದೂ ಸಂಪನ್ಮೂಲಗಳು

ಕನ್ನಡ-Kannada

god(s) of hinduism?

Leave a Reply