ಎಲ್ಲಾ ದಾರಿಗಳೂ ದೇವರೆಡೆಗೆ

ಧರ್ಮಗಳಲ್ಲಿರುವ ಸಾಮ್ಯತೆ ಹಾಗೂ ಒಂದೇ ರೀತಿಯ ಪ್ರತಿಪಾದನೆಗಳು ಎಲ್ಲಾ ಧಾರ್ಮಿಕ ತತ್ವಗಳು ಹಾಗೂ ಆಚರಣೆಗಳನ್ನು ಸಮಾನವಾಗಿಸುತ್ತವೆ ಎಂಬ ತೀರ್ಮಾನಕ್ಕೆ ಕೆಲವು ಜನರು ಬಂದಿರುತ್ತಾರೆ. ನೀರ ಮೇಲಿನ ಈ ವೀಕ್ಷಣೆ, ಟೈಟಾನಿಕ್ ಹಡಗು, ಧಾರ್ಮಿಕ ವೈವಿಧ್ಯತೆ ಎಂಬ ನೀರಿನಲ್ಲಿ ಅತೀಯಾದ ಆತ್ಮವಿಶ್ವಾಸದಿಂದ ಸಾಗುವಾಗ ಹಿಮಗಡ್ಡೆಯ ತುದಿಯನ್ನು ಮಾತ್ರ ನೋಡಲು ಸಾಧ್ಯ. ಅದರಡಿಯಲ್ಲಿರುವ ಗಟ್ಟಿ ಶಿಲಾರೂಪದಲ್ಲಿರುವ ಹಿಮಗಡ್ಡೆ ದೊಡ್ಡ ಮಟ್ಟದ ತೊಂದರೆ ಉಂಟುಮಾಡುತ್ತದೆ ಎಂಬ ಗಂಭೀರ ವಿಷಯವನ್ನು ಅರಿತಿರುವುದಿಲ್ಲ. ಹಾಗಾಗಿ, ಈ ದುರಂತಮಯ, ಮುಳುಗುವ ಹಡಗನ್ನು ಹತ್ತಿದಲ್ಲಿ ಸುರಕ್ಷಿತವಾಗಿ ಮರಳುತ್ತೇನೆ ಎಂಬ ಚಿಂತೆ ಪ್ರಯಾಣಿಕನಿಗೆ ಇಲ್ಲದೆ ಇರುವುದರಿಂದ, ಇದು ಒಡೆದುಹೋಗುವುದಿಲ್ಲ ಎಂಬ ತಪ್ಪು ಕಲ್ಪನೆಯಲ್ಲಿರುತ್ತಾನೆ.

ಈ ಧಾರ್ಮಿಕ ಜಗತ್ತಿನ ಹೆಚ್ಚಿನ ಆಚರಣೆ, ನಂಬಿಕೆಗಳು ಅನೈತಿಕ ಹಾಗೂ ಸರಿಪಡಿಸಲಾಗದಷ್ಟು ಹಾಳಾಗಿ ಹೋಗಿರುವುದನ್ನು ಗುರುತಿಸುವಲ್ಲಿ ಹೆಚ್ಚಿನ ಜನರು ವಿಫಲರಾಗುತ್ತಾರೆ. ಈ ಒಳಾರ್ಥವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಒಬ್ಬ ವ್ಯಕ್ತಿ, ಇತರೆ ಧರ್ಮ ಹಾಗೂ ನಂಬಿಕೆಗಳನ್ನು ತುಲನೆ ಮಾಡಿ ಅಧ್ಯಯನ ಮಾಡಿದಾಗ ತಿಳಿಯುತ್ತದೆ. ಇದು ಸೂರ್ಯನ ಬೆಳಕಿನಂತೆ. ಇದರಿಂದ ಧರ್ಮದ ನಿಜ ಸ್ವರೂಪವನ್ನು ಅರಿತು ಅದರಲ್ಲಿರುವ ಬಹುಮುಖ್ಯ ವ್ಯತ್ಯಾಸಗಳನ್ನು ತಿಳಿದು, ಅದರಿಂದಾಗಬಹುದಾದ ಅಪಾಯದಿಂದ ದೂರ ಉಳಿಯುತ್ತಾರೆ.

ಒಬ್ಬ ಹಿಂದೂ ಇದನ್ನು ಒಂದು ಸಮಸ್ಯೆ ಎಂದು ಹೇಳುವುದಿಲ್ಲ. ಬದಲಾಗಿ, ಇದು ಅವರ ವಿಚಾರಗಳಿಗೆ ಹೊಂದಿಕೊಳ್ಳುತ್ತದೆ, ಹಾಗಾಗಿ ಇದರ ಕುರಿತು ಅವರು ಮಾತನಾಡಲು ಸಿದ್ಧರಿಲ್ಲ. ಯಾಕೆಂದರೆ ಅವರ ದಿನದ ಜೀವನ ತರ್ಕ ಹಾಗೂ ಕಾರಣಗಳ ಪ್ರತಿಬಿಂಬವಾಗಿದೆ. ಇದು ಅವರ ಧರ್ಮದ ನಂಬಿಕೆಗೆ ಹೊಂದಿಕೊಳ್ಳುತ್ತದೆ. ಇದರಲ್ಲಿ ಮೂಲಭೂತವಾದಿ, ರಾಷ್ಟ್ರೀಯವಾದಿ ಹಿಂದೂಗಳು, ಧಾರ್ಮಿಕ ಚಳುವಳಿಗಳನ್ನು ಬೆಂಬಲಿಸುವುದಿಲ್ಲ ಮತ್ತ ಪೂರ್ವದ ಗುರುಗಳು ಪಾಶ್ಚಿಮಾತ್ಯರ ಚಿಂತನೆಯ ದಾರಿಯನ್ನು ಬದಲಾಯಿಸುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ.

ಪ್ರಾಯೋಗಿಕವಾಗಿ ಹೇಳುವುದಾದರೆ, ಇಂತಹ ಯೋಚನೆ ವಿಕಸನಗೊಂಡಿದ್ದು ಬಹುದೇವತಾ ಆಚರಣೆಗಳ ಗೊಂದಲಗಳ ನಡುವಿನ ಸಮಸ್ಯೆಗಳಿಂದ ಉಂಟಾದ ಒತ್ತಡವನ್ನು ನಿವಾರಿಸಲು ಇರಬಹುದು. ಈ ದಾರಿಗಳ ನಡುವೆ ಸೇತುವೆ ಕಟ್ಟುವ ಪ್ರಯತ್ನದ ಮೂಲಕ ಜೀವನ ಪಥವನ್ನು ಅಗಲೀಕರಿಸುವ ಆಶಯ ಇದ್ದರೂ ಕೂಡ, ಇದರ ಹಿಂದೆ, ಧಾರ್ಮಿಕ ಜಾತ್ಯಾತೀತೆಯ ಮುಖವಾಡ ಹೊಂದಿರುವ ನಾಯಕನ ಅಧೀನದಲ್ಲಿರುವ ಮನಸ್ಥಿತಿಯಾಗಿದೆ.

ಅದಾಗ್ಯೂ, ಕುರುಡ ಹಾಗೂ ಆನೆಯ ನಡುವಿನ ದಂತಕತೆಯನ್ನು ದೇವರ ಪರಿಕಲ್ಪನೆಗೆ ಸಂಬಂದಿಸುವ ಕೆಲಸವನ್ನು ಕೆಲವರು ಪ್ರಯತ್ನಿಸಿದ್ದಾರೆ. ಎಲ್ಲಾ ಮನುಕುಲದಲ್ಲಿ ದೇವರ ಪರಿಕಲ್ಲನೆ ಮುಖ್ಯವಾಹಿನಿಗೆ ನಮ್ಮತನವನ್ನು ತೋರಿಸಲು ಬೇಕಾಗುವ ಜ್ಞಾನದಂತೆ ಸಮಾನವಾಗಿದೆ. ಆದರೆ ಇದು ಸತ್ಯದ ಆಧಾರದಲ್ಲಿ ನೈಜತೆಯೆಡೆಗೆ ಯಾವತ್ತಿಗೂ ನಮ್ಮನ್ನು ಕೊಂಡೊಯ್ಯುವುದಿಲ್ಲ.

ತಾನು ದೇವರನ್ನು ನೋಡಬಲ್ಲೆ ಎಂದು ಹೇಳುವ ಕುರುಡನ ಮಾತು ಸುಳ್ಳು ಅಥವಾ ವಂಚನೆಯೆಂದು ಹೇಳಲಾಗುವುದಿಲ್ಲ. ಈ ರೀತಿಯ ವಸ್ತುನಿಷ್ಠವಾದ ನಿಮ್ಮನ್ನು ದಾರಿ ತಪ್ಪಿಸಬಹುದು. ಏಕೆಂದರೆ, ಒಬ್ಬರ ಗ್ರಹಿಕೆ ಹಲವಾರು ಕಾರಣಗಳಿಗೋಸ್ಕರ ಸರಿಯಿಲ್ಲದಿರಬಹುದು. ಧಾರ್ಮಿಕ ಗುರುಗಳು, ಸನ್ಯಾಸಿಗಳು ಮತ್ತು ಯೋಗಿಗಳು ದುರಹಂಕಾರದಿಂದ, ತಮ್ಮ ಸ್ವಾರ್ಥಸಾಧನೆಗಾಗಿ ಕುರುಡನ ತಲೆಯನ್ನು ಹಾಳು ಮಾಡಿರಬಹುದು.
ಅವರು ದೇವರನ್ನು ಮುಟ್ಟುತ್ತಾರೆ ಎಂದು ಯಾರು ಹೇಳಿದ್ದು? ಇದು ಮೂರ್ತಿಪೂಜೆಯ ಮೂಲಕ ತಾವಾಗಿಯೇ ಕಲ್ಪಿಸಿದ ಕಲೆಯಾಗಿದ್ದು, ತಮ್ಮ ಅವಶ್ಯಕತೆಗೆ ತಕ್ಕಂತೆ ದೇವರನ್ನು ಚಿತ್ರಿಸುವ ವಿಧಾನವಾಗಿದೆ. ಯೇಸುಕ್ರಿಸ್ತ ಈ ಕುರಿತು ಎಚ್ಚರಿಕೆ ನೀಡುತ್ತಾರೆ. ಸುಳ್ಳು ಪ್ರವಾದಿಗಳು ಅಥವಾ ಕುರುಡು ಗುರುಗಳು, ತಾವು ಸ್ವತಃ ದೇವರ ಕುರಿತು ಕುರುಡಾಗಿದ್ದು, ಬೆಳಕಿಲ್ಲದ ದಾರಿಯನ್ನಷ್ಟೇ ತೋರಿಸುತ್ತಾರೆ. ಅದರ ಮೂಲಕ ಅವರು ಹಾಗೂ ಅವರ ಹಿಂಬಾಲಕರು ಖಂಡಿತವಾಗಿಯೂ ಅಡ್ಡದಾರಿಯನ್ನೇ ತುಳಿಯುತ್ತಾರೆ.

ಈ ಕುರಿತು ಬೈಬಲ್ ಏನು ಹೇಳುತ್ತದೆ ಎಂಬುದು ಇಲ್ಲಿದೆ-

ಮತ್ತಾಯನು 24:24
24 ಯಾಕಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು ಸಾಧ್ಯವಾದರೆ ಆಯಲ್ಪಟ್ಟವರನ್ನು ಸಹ ಮೋಸಗೊಳಿಸುವಂತೆ ದೊಡ್ಡ ಸೂಚಕ ಕಾರ್ಯ ಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸು ವರು..

ರೋಮಾಪುರದವರಿಗೆ 1:18-23
18 ಸತ್ಯವನ್ನು ಅನೀತಿಯಲ್ಲಿ ತಡೆಹಿಡಿದ ಮನುಷ್ಯರ ಎಲ್ಲಾ ಭಕ್ತಿಹೀನತೆಗೆ ಮತ್ತು ಅನೀತಿಗೆ ವಿರೋಧ ವಾಗಿ ದೇವರ ಕೋಪವು ಪರಲೋಕದಿಂದ ತೋರಿ ಬರುತ್ತದೆ. . 19 ದೇವರ ವಿಷಯವಾಗಿ ತಿಳಿಯಬಹು ದಾದದ್ದು ಅವರಲ್ಲಿ ಪ್ರಕಟವಾಗಿದೆ; ದೇವರೇ ಅದನ್ನು ಅವರಿಗೆ ತಿಳಿಯಪಡಿಸಿದ್ದಾನೆ. 20 ಹೇಗೆಂದರೆ ಜಗದು ಉತ್ಪತ್ತಿಗೆ ಮೊದಲುಗೊಂಡು ಆತನ ಅದೃಶ್ಯವಾದವುಗಳು ಅಂದರೆ ಆತನ ನಿತ್ಯ ಶಕ್ತಿಯೂ ದೈವತ್ವವೂ ಸೃಷ್ಟಿಗಳನ್ನು ಗ್ರಹಿಸುವದರ ಮೂಲಕ ಸ್ಪಷ್ಟವಾಗಿ ಕಾಣಬರುತ್ತವೆ.ಆದಕಾರಣ ಅವರು ನೆವವಿಲ್ಲದವರಾಗಿದ್ದಾರೆ. 21 ಅವರು ದೇವರನ್ನು ಅರಿತಾಗ ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ, ಕೃತಜ್ಞತೆಯುಳ್ಳವರಾಗಿಯೂ ಇರಲಿಲ್ಲ; ಅವರು ತಮ್ಮ ಕಲ್ಪನೆಗಳಲ್ಲಿ ವಿಫಲರಾದರು ಮತ್ತು ಮೂರ್ಖತನದ ಅವರ ಹೃದಯವು ಕತ್ತಲಾ ಯಿತು 22 ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚ ರಾದರು, 23 ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಕ್ಷಿ, ಪಶುಗಳ ಮತ್ತು ಹರಿದಾಡುವವುಗಳ ಪ್ರತಿಮೆಗೆ ಮಾರ್ಪಡಿಸಿದರು.

ಅಂತಿಮವಾಗಿ ಹೇಳುವುದಾದರೆ, ದೇವರ ಕುರಿತಾದ ಎಲ್ಲಾ ವಿಚಾರಗಳು ಮಾನ್ಯತೆಯನ್ನು ಹೊಂದಿವೆ. ಇಲ್ಲಿ ಯಾವುದೇ ಒಂದು ವಿಚಾರವೂ ಕೂಡ ಸಂಪೂರ್ಣವಾಗಿ ಸರಿಯಲ್ಲ, ಎಲ್ಲಾ ವಿಚಾರಗಳು ಸಮವಾಗಿ ಮಾನ್ಯತೆಯನ್ನು ಹೊಂದಿವೆ ಎಂಬ ಮಾತನ್ನು ತಾವಾಗಿಯೇ ಹಿಂದೆ ತೆಗೆದುಕೊಳ್ಳಬೇಕು. ಪ್ರತೀ ನಡತೆಯೂ ಕೂಡ, ಸಣ್ಣ ಮಟ್ಟಿಗೆ ಆದರೆ ದೊಡ್ಡದಾಗಿ ಹಿಂದೂ ಧರ್ಮದ ವಿಶೇಷ ಮತ್ತು ಅನನ್ಯ ವಿಚಾರಗಳನ್ನು ಅವರಾಗಿಯೇ ತೊಂದರೆಗೆ ಸಿಲುಕಿಸುತ್ತಿದ್ದಾರೆ. ಇವೆಲ್ಲವೂ ಬಹುಮುಖ್ಯವಾದುದು. ಇಲ್ಲದಿದ್ದಲ್ಲಿ, ಹಿಂದೂ ಬಾಂಧವರು ಈ ಎಲ್ಲಾ ಸಮಸ್ಯೆ, ಗೊಂದಲಗಳಿಲ್ಲದ ಇನ್ನೊಂದು ತಂಡ ಸೇರಲು ಹಿಂಜರಿಯರು. ಅಥವಾ ದೇವರ ಅನುಭವದ ಮೇರೆಗೆ ತಮಗೆ ಸಂಬಂಧವೇ ಇಲ್ಲದ ಧರ್ಮವನ್ನು ಸ್ವೀಕರಿಸುವರು. ಇನ್ನೂ ಹೇಳಬೇಕೆಂದರೆ, ನಮ್ಮ ಜೊತೆ ಸಣ್ಣ ಸತ್ಯವಿದೆ. ಹಾಗಾದರೆ, ತಾವು ಹೇಳಿದ್ದೆ ಸರಿ, ನಮ್ಮದು ಮಾತ್ರ ಸತ್ಯ ಎಂದು ಹೇಳಲು ಅವರಿಗೆ ಅಷ್ಟೊಂದು ಮಾಹಿತಿಗಳು ಹೇಗೆ ದೊರಕಿದವು ಎಂಬದನ್ನು ನಾವು ಪ್ರಶ್ನಿಸಬೇಕಿದೆ.

ಕೊನೆಯದಾಗಿ, ವಿವಿಧ ನಂಬಿಕೆಗಳು, ನಂಬಿಕೆಯ ವ್ಯವಸ್ಥೆಗಳಿಗೆ ಸ್ಥಾನ ನೀಡುವುದು. ಆದರೆ ಪ್ರತೀ ನಂಬಿಕೆ ಕೂಡ ಮಾನ್ಯ ಹಾಗೂ ಸತ್ಯ ಎಂದು ಇನ್ನೊಬ್ಬರು ಹೇಳುತ್ತಾರೆ. ಧಾರ್ಮಿಕ ಸಹನೆ ಒಂದು ವಿಷಯವಾದರೆ, ಧಾರ್ಮಿಕ ಸಂಶ್ಲೇಷಣೆ, ಸಾಪೇಕ್ಷತಾವಾದ, ಸಮಗ್ರವಾದ ಹಾಗೂ ಸರ್ವಮೋಕ್ಷವಾದ ಇವು ಉಳಿದ ವಿಚಾರಗಳಾಗಿವೆ. ವರ್ಜನೆ ಒಳ್ಳೆಯದೇ. ಆದರೆ ಇದು ಸತ್ಯದ ಗುಣಮಟ್ಟವನ್ನು ಪರಿಹಾರವಲ್ಲ. ಯಾರೊಬ್ಬರು ದೇವರೆಡೆಗೆ ಸಾಗಲು ಇರುವುದು ಒಂದೇ ದಾರಿ ಅಂದಾಗ, ದೇವನೆಡೆಗೆ ನೂರಾರು ನೈಜ ದಾರಿಗಳಿವೆ ಎಂದು ಹೇಳಬಹುದು. ಈ ಸಹನೆ ಎಲ್ಲಾ ವಸ್ತು-ವಿಚಾರಗಳ ಮಾಪನವಲ್ಲ, ಬದಲಾಗಿ ಸತ್ಯ ಹೇಳುವಾಗಿನ ಸಹನೆ ಹಾಗೂ ಮನಪೂರ್ವಕವಾದ ಪ್ರೀತಿ.

ಅಂತಿಮವಾಗಿ, ಬೈಬಲ್ ಹೇಳುವಂತೆ, ಒಂದನ್ನೊಂದು ವಿರೋಧಿಸುವ ಎರಡು ದಾರಿಗಳಿವೆ. ಒಂದು ಅಗಲವಾದ ಹಲವು ರಸ್ತೆಗಳ ದಾರಿ, ಅದು ನಾಶದತ್ತ ಸಾಗುತ್ತದೆ. ಮತ್ತೊಂದು ಕಿರಿದಾದ ಒಂದೇ ರಸ್ತೆ, ಅದು ಬದುಕನ್ನು ಬೆಳಗಿಸುವತ್ತ ಸಾಗಿಸುತ್ತದೆ. ನಮಗೆಲ್ಲರಿಗೂ ನಡೆಯಲು ಕಾಲು ಇರುವಂತೆ, ಪ್ರಯಾಣಿಸಬೇಕಾದ ಮಾರ್ಗದ ಆಯ್ಕೆಯೂ ನಮಗಿದೆ. ನಿಮಗೆ ನನ್ನ ಪ್ರಶ್ನೆಯೇನೆಂದರೆ, ಅಗಲವಾದ ಆದರೆ ಎಲ್ಲಾ ದಾರಿಗಳನ್ನು ಒಟ್ಟಾಗಿಸುವ ಮಾರ್ಗವನ್ನು ಆಯ್ಕೆ ಮಾಡುವಿರಾ ಅಥವಾ ಬದುಕಿನ ದಾರಿಯನ್ನು ತೋರಿಸುವ ಕಿರಿದಾದ ಮಾರ್ಗದಲ್ಲಿ ಸಾಗುವ ಧೈರ್ಯ ತೋರುವಿರಾ? ಯೇಸುಕ್ರಿಸ್ತ ಹೇಳುತ್ತಾರೆ, ನಾನು ಮಾರ್ಗ, ನಾನು ಸತ್ಯ ಮತ್ತ ಜೀವನ. ಹಾಗಾಗಿ ಯೇಸುವಿನ ಪಥವನ್ನು ಬಿಟ್ಟು ಯಾರಿಂದಲೂ ದೇವನೆಡೆಗೆ ಸಾಗಲು ಸಾಧ್ಯವೇ ಇಲ್ಲ. ಕೊನೆಯದಾಗಿ, ಸತ್ಯಕ್ಕಾಗಿ ಕಣ್ಣುಕಾಣದೆ ತಡಕಾಡಲು ದೇವನು ಬಿಡುವುದಿಲ್ಲ. ಬದಲಾಗಿ, ನೀವು ದೇವನನ್ನು ಮನಪೂರ್ವಕವಾಗಿ ನಂಬಿದಲ್ಲಿ ಆತ ನಿಮ್ಮ ಕಣ್ಣನ್ನು ತೆರೆಯಿಸಿ ತನ್ನ ವಿಶೇಷತೆಯನ್ನು ನಿಮಗೆ ತೋರ್ಪಡಿಸುತ್ತಾನೆ.

ಮತ್ತಾಯನು 11:28-30
28 ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು. 29  ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. 30 ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ.”

 

 

 

ದೇವರೊಂದಿಗೆ ಸಂಬಂಧವನ್ನು ಹೊಂದುವುದು ಹೇಗೆ

ಹಿಂದೂ ಸಂಪನ್ಮೂಲಗಳು

ಕನ್ನಡ-Kannada

All Paths Lead to God

Leave a Reply