ಹಿಂದೂ ಧರ್ಮ ಮತ್ತು ಪುನರ್ಜನ್ಮ

ಹೆಚ್ಚಿನ ಪೂರ್ವಾತ್ಯ ಧರ್ಮಗಳ ಪ್ರಕಾರ ಪುನರ್ಜನ್ಮ ಎನ್ನುವುದು, ಸಾವಿನ ನಂತರ ಜೀವನ ಕರ್ಮಗಳನ್ನು ಅನುಭವಿಸುವ ಒಂದು ದಾರಿಯಾಗಿದೆ. ಹಿಂದೂಗಳು ಜೀವನವನ್ನು ಹುಟ್ಟು, ಸಾವು, ಮರುಹುಟ್ಟು ಅಂದರೆ ಸಂಸಾರದ ಚಕ್ರ ಎಂದು ನೋಡುತ್ತಾರೆ. ಸಂಸಾರ ಎಂಬುದು ಪೂರ್ವಜನ್ಮದ ಕರ್ಮವಾಗಿದ್ದು, ಇಲ್ಲಿ ಹಿಂದಿನ ಜನ್ಮದಲ್ಲಿ ಮಾಡಿದ ಸರಿ-ತಪ್ಪುಗಳಿಗೆ ಅನ್ವಯಿಸುವಂತೆ ಸರಿಯಾಗಿ ಫಲಿತಾಂಶವನ್ನು ಅನುಭವಿಸಬೇಕು. ಇದರ ಮೂಲಕ ವ್ಯಕ್ತಿಯೊಬ್ಬ ಕರ್ಮಗಳನ್ನು ಅನುಭವಿಸಿ ಮೋಕ್ಷ ಅಥವಾ ಮುಕ್ತಿಯನ್ನು ಪಡೆಯುತ್ತಾನೆ. ಹೀಗೆ ಸಂಸಾರದ ಜಂಜಾಟದಿಂದ ಮುಕ್ತನಾಗುತ್ತಾನೆ. ಹಾಗಾಗಿ ಪ್ರತಿ ಹಿಂದೂವಿನ ಅಂತಿಮ ಆಸೆ, ಸಂಸಾರದ ಚಕ್ರದಿಂದ, ಕರ್ಮಗಳನ್ನು ಅನುಭವಿಸಿ ಮುಕ್ತಿಯನ್ನು ಪಡೆಯುವುದಾಗಿದೆ. ಈ ಶುದ್ಧತ್ವವನ್ನು ಪಡೆಯಲು ಆತ ಏನೇ ಆದರೂ ಅನುಭವಿಸುತ್ತಾನೆ. ಈ ಮುಕ್ತಿಯನ್ನು ಪಡೆಯುವ ಹಲವಾರು ದಾರಿಗಳಿವೆ. ಯೋಗ ಮಾಡುವುದು, ಜ್ಞಾನ, ಭಕ್ತಿ ಹಾಗೂ ಕೆಲಸಗಳ ಮೂಲಕ ಭೌತಿಕ ಲೋಕದಿಂದ ಆತ್ಮವನ್ನು ಬಿಡುಗಡೆಗೊಳಿಸುವುದಾಗಿದೆ.

ಅದಾಗ್ಯೂ, ಈ ನಂಬಿಕೆಯ ವ್ಯವಸ್ಥೆ ರುಜುವಾತಾಗಿಲ್ಲ, ಆದರೂ ಧಾರ್ಮಿಕ ನಂಬಿಕೆಗಳ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿ ನಂಬುವವರು ಇದನ್ನು ಸ್ವೀಕರಿಸಿದ್ದಾರೆ ಮತ್ತು ಮುಜುಗರವಾಗುವ ರೀತಿಯಲ್ಲಿ ಪಾಲಿಸುತ್ತಿದ್ದಾರೆ. ನಾನು ಇತ್ತೀಚೆಗೆ ಸಾವಿನ ನಂತರದ ಜೀವನದ ಕುರಿತು ಹಲವಾರು ವೈದ್ಯರು, ಸಂಶೋಧಕರು ಹಾಗೂ ವ್ಯಕ್ತಿಗಳನ್ನು ಸಂದರ್ಶಿಸಿ ಲೇಖನವನ್ನು ಬರೆದಿದ್ದೆ. ಅವರೆಲ್ಲರೂ ಈ ವಿಚಾರದ ಪ್ರಾಯೋಗಿಕ ಮಾಹಿತಿಗಳನ್ನು ಕಲೆಹಾಕುತ್ತಿದ್ದರು. ಅವರ ಸಂಶೋಧನೆಯ ಪ್ರಕಾರ, ಬೈಬಲ್ ಹೇಳುವಂತೆ ಜನರು ಸಾವಿನ ನಂತರ ಪುನರ್ಜನ್ಮ, ಮುಕ್ತಿ, ಮೋಕ್ಷ ಪಡೆಯುವುದಿಲ್ಲ, ಬದಲಾಗಿ ಯಾತನಾಮಯ ನರಕ ಅಥವಾ ಸ್ವರ್ಗಸುಖವನ್ನು ಅನುಭವಿಸುತ್ತಾರೆ

Is Hell Real?

ಹಿಂದೂ ಧರ್ಮ, ದುಷ್ಟಶಕ್ತಿಗಳ ಸಮಸ್ಯೆಗಳನ್ನು ಮತ್ತು ಈ ಸತ್ಯದ ಸರಮಾಲೆಗಳನ್ನು ಗುರುತಿಕೊಂಡಿದೆ ಎಂದು ನಾನು ನಂಬುತ್ತೇನೆ. ಆದರೆ ಮರಣಾನಂತರ ವಿಚಾರಗಳ ಕುರಿತು ನಾನು ಮೊದಲೇ ಬೈಬಲ್ ದಾಖಲೆಗಳನ್ನು ದಾಖಲಿಸಿದ ಮಾಹಿತಿಗಳಿಗಿಂತ ಅವರ ದೃಷ್ಠಿಕೋನಗಳು ವಿಭಿನ್ನವಾಗಿದೆ.

ರೋಮನ್ 1 ಮತ್ತು 2 ರಲ್ಲಿ, ದೇವರು ಜನರಿಗೆ ನೈತಿಕ ದಿಕ್ಸೂಚಿಯನ್ನು ನೀಡಿರುವ ಉಲ್ಲೇಖವಿದೆ. ಈ ದಿಕ್ಸೂಚಿ, ನಮ್ಮ ಮುಖಪುಟದಲ್ಲಿ ಗಟ್ಟಿಯಾಗಿದ್ದು, ಆಧ್ಯಾತ್ಮಿಕ ವಾಯುಭಾರ ಮಾಪಕದಂತೆ, ನಮ್ಮ ಸರಿ-ತಪ್ಪುಗಳನ್ನು ನಮಗೆ ತೋರಿಸುವ ಮೂಲಕ ಪಾಪ ಹಾಗೂ ನ್ಯಾಯದ ಕುರಿತು ನಮ್ಮನ್ನು ಎಚ್ಚರಿಸುತ್ತದೆ. ಈ ಜ್ಞಾನವು ಸಾಮಾನ್ಯವಾಗಿದೆ. ಮತ್ತು ಇದು ನಮ್ಮನ್ನು ಮನುಷ್ಯರನ್ನಾಗಿಸುತ್ತದೆ. ಆದರೂ, ಇದು ನಮ್ಮ ನೈತಿಕ ಸಂದಿಗ್ಧತೆಗಿಂತ ಹೊರತಾಗಿ, ಕ್ರಿಶ್ಚಿಯನ್ ನಂಬಿಕೆ ಮತ್ತು ಹಿಂದೂ ವಿಚಾರಗಳನ್ನು ತುಲನೆ ಮಾಡಿ ಇವರೆಡರ ನಡುವಿನ ವಿಚಾರ ಬಿನ್ನಾಭಿಪ್ರಾಯ, ಸಹಜ ಬುದ್ಧಿವಂತಿಕೆಯನ್ನು ತೋರ್ಪಡಿಸುತ್ತದೆ.

ಒಬ್ಬ ವ್ಯಕ್ತಿ ಒಮ್ಮೆ ಸಾಯುವುದನ್ನು ಮತ್ತು ಅನಂತರ ನ್ಯಾಯ ಪಡೆಯುವುದನ್ನು ಬೈಬಲ್ ಬೆಂಬಲಿಸುತ್ತದೆ. ಆದರೆ ಹಿಂದೂಗಳು ಆತ್ಮ ದೇಹಾಂತರ ಆಗುವುದರ ಮೂಲಕ ಅವರವರ ಕರ್ಮಕ್ಕನುಗುಣವಾಗಿ, ಇನ್ನೊಂದು ಜೀವನವನ್ನು ನವೀಕರಣ ಮಾಡಿಕೊಳ್ಳುತ್ತಾನೆ ಎಂದು ನಂಬುತ್ತಾರೆ.

ನಾನು ನೋಡಿದ ಹಾಗೆ ಹಿಂದೂ ಧರ್ಮದ ಪ್ರಾಪಂಚಿಕ ದೃಷ್ಠಿಕೋನದಲ್ಲಿರುವ ಸಮಸ್ಯೆಗಳೆಂದರೆ, ಮಾನವ ಜೀವನದ ಪಾವಿತ್ರ್ಯತೆ ಸಂಘರ್ಷ ಅಥವಾ ವಿರೋಧಾತ್ಮಕತೆ, ಕೆಲವೊಂದು ಪ್ರಾಣಿಗಳನ್ನು ಮತ್ತು ಮರಗಳನ್ನು ಮನುಷ್ಯರಿಗಿಂತ ಚೆನ್ನಾಗಿ ನೋಡಿಕೊಳ್ಳುವುದನ್ನು, ಗೌರವ ನೀಡುವುದನ್ನು ನೋಡಿದ್ದೇನೆ. ಭಾರತದ ಜನಸಂಖ್ಯೆಯ ಐದನೇ ಒಂದರಷ್ಟಿರುವ ದಲಿತರು ಅಥವಾ ಅಸ್ಪೃಶ್ಯರು ಎಂದು ಹಣೆಪಟ್ಟಿ ನೀಡಿರುವ ಮತ್ತು ವರ್ಗೀಕರಿಸಿರುವ ಜನರನ್ನು ನಾನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ.

ಈ ರೀತಿಯ ವರ್ಣಭೇದಗಳು ಕೆಲವೊಂದು ಸಂದರ್ಭಗಳಲ್ಲಿ ಸರಕಾರ ನಿಷೇಧಿಸಿರುವ ಜೀತಪದ್ಧತಿಯಂತೆ ಗೋಚರಿಸುತ್ತದೆ. ಆದರೆ, ಭಾರತೀಯ ಸಮಾಜದಲ್ಲೇ, ಹೆಚ್ಚಿನ ಸಂಖ್ಯೆಯ ಹಿಂದೂ ಜನರು ಇದನ್ನು ಗೊತ್ತಿದ್ದೇ ಬೆಂಬಲಿಸುತ್ತಿದ್ದಾರೆ.

ನೈಜ ಲೋಕದಲ್ಲಿ, ಈ ಧಾರ್ಮಿಕ ದಬ್ಬಾಳಿಕೆ, ರಾಜಕೀಯ ಹಿಡಿತವನ್ನು ಪಡೆಯಲು ಸಹಾಯಕವಾಗಿದೆ. ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಈ ಜನರು ಮೇಲ್ವರ್ಗದವರ ಅಡಿಯಾಳಾಗಿ, ಅವರ ಮನೆಗೆಲಸ ಮಾಡುತ್ತಾ, ಅವರ ಸಂಸ್ಕೃತಿಯ ಯಶಸ್ಸಿಗೆ ಸಹಕರಿಸುತ್ತಾರೆ. ಆದ್ದರಿಂದ ಕೆಳವರ್ಗದ ಜನರ ಕುರಿತಾಗಿ ಈ ರೀತಿಯ ದಬ್ಬಾಳಿಕೆ, ಅವಮಾನಕರ ದುರ್ವರ್ತನೆಯನ್ನು ಸರಕಾರ ಒಂದು ಅಗತ್ಯ ದುಷ್ಟ ಎಂದು ಸಹಿಸಿಕೊಳ್ಳಬಹುದು.

ಈ ಜನರು ತಮ್ಮ ಪೂರ್ವಜನ್ಮದ ಕರ್ಮದ ಫಲವಾಗಿ ಕೆಳಸ್ತರದಲ್ಲಿ ಪುರ್ನಜನ್ಮ ಪಡೆದು ದಬ್ಬಾಳಿಕೆಯ ವಿಧಿಗೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ, ಯಾವುದೇ ಜೀವಿಗೂ ಹಿಂಸೆ ಮಾಡಬಾರದು ಎಂದು ಅಹಿಂಸಾವಾದವನ್ನು ಪ್ರತಿಪಾದಿಸುವ ಹಿಂದೂ ಧರ್ಮ ಈ ದಬ್ಬಾಳಿಕೆಯನ್ನು ಹೇಗೆ ಕಡೆಗಣಿಸಿದೆ ಎಂದು ನನಗೆ ಆಶ್ಚರ್ಯವಾಗುತ್ತದೆ.

ಕ್ರಿಶ್ಚಿಯನ್ ಮಿಷನರಿಗಳು ದಲಿತರ ಬಳಿ ಸಾಗಿ, ಕ್ರಿಸ್ತನ ಪ್ರೀತಿಯನ್ನು, ಎಲ್ಲಾ ಮಾನವರಿಗೆ ದೇವರು ದಯಮಾಡಿರುವ ಜೀವನ ದಾರಿಯನ್ನು ಅವರಿಗೆ ತೋರಿಸಿವೆ. ಆದರೆ ಅಹಿಂಸಾ ಪ್ರತಿಪಾದಕ ಹಿಂದೂಗಳು ಈ ವಿಷಯದ ಬಗ್ಗೆ ದಂಗೆದ್ದು, ಕ್ರಿಶ್ಚಿಯನ್ ದಲಿತರು ಹಾಗೂ ಮಿಷನರಿಗಳಿಗೆ ದಾಳಿ ಮಾಡಿ ಹಾನಿಯುಂಟುಮಾಡಿದ್ದಾರೆ.

ಅವರು ಏನು ಹೇಳುತ್ತಾರೆ ಎಂದರೆ, ತಮ್ಮ ವ್ಯವಸ್ಥೆಯ ನಿರ್ವಹಣೆ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದಾರೆ ಮತ್ತು ಆ ಹಿಡಿತವನ್ನು ಹಿಂದೆ ಪಡೆಯಲು ಅವರು ಹಿಂಸೆ ಹಾಗೂ ಭಯದ ತಂತ್ರವನ್ನು ಅನುಸರಿಸಿದ್ದಾರೆ. ಇದು ಅವರ ಶಾಂತಿಪ್ರಿಯ ಧಾರ್ಮಿಕ ವಿಚಾರಧಾರೆಗಳಿಗೆ ವಿರೋಧಭಾಸವಾಗಿ ಗೋಚರಿಸಿದೆ.

ಕೆಲವು ಹಿಂದೂಗಳಿಗೆ ಅಹಿಂಸೆ ಎಂದರೆ ಮಾಂಸಾಹಾರ ವರ್ಜನೆ ಹಾಗೂ ತ್ಯಾಗ. ಆದರೆ ಹಿಂದೂ ದೇವತೆಗಳನ್ನು ಸಂಪ್ರೀತಗೊಳಿಸಲು, ಈ ಕೆಳವರ್ಗದ ಜನರನ್ನು ಮುಖ್ಯವಾಹಿನಿಯಿಂದ ತ್ಯಜಿಸುವುದು ನ್ಯಾಯವೇ? Also another ಇನ್ನೊಂದು ಕಿತ್ತಾಟದ ಅಂಶವೆಂದರೆ, ಮಾನವ ಜೀವನ ಅನಂತತೆ ಎಂಬ ಹಿಂದೂ ಧರ್ಮದ ತಪ್ಪು ಕಲ್ಪನೆ. ಮತ್ತೊಂದೆಡೆ ಸೀಮಿತ ಭೂಮಿಯ ಪರಿಕಲ್ಪನೆಯನ್ನು ಹಿಂದೂ ಧರ್ಮ ಪ್ರತಿಪಾದಿಸುತ್ತದೆ. ವೈಜ್ಞಾನಿಕವಾಗಿಯೂ ಈ ಸೀಮಿತತೆಯ ಅರಿವನ್ನು ವಿಜ್ಞಾನಿಗಳು ಟೆಲಿಸ್ಕೋಪ್ ಹಾಗೂ ಇತರ ಉಪಕರಣಗಳನ್ನು ಬಳಸಿ ಅರ್ಥೈಸಿದ್ದಾರೆ. ಅದನ್ನು “ಬಿಗ್ ಬ್ಯಾಂಗ್ “ಎನ್ನುತ್ತಾರೆ.

ಈ ಸೀಮಿತ ಅಸ್ತಿತ್ವದಲ್ಲಿ ಮಾನವನ ಆತ್ಮ ಅನಂತವಾದುದು ಎಂಬ ಅಭಿಪ್ರಾಯ ಅಸಂಬದ್ಧವೇ ಸರಿ.

ಆದ್ದರಿಂದ, ಜೀವನ ಅನಂತತೆಯ ಅವಿಭಾಜ್ಯ ಅಂಗವಾಗಿದ್ದಲ್ಲಿ, ಮೊದಲ ಮಾನವ ಹೇಗೆ ಹುಟ್ಟಿದ? ಅವನಿಗೆ ಪೂರ್ವಜನ್ಮದ ಕರ್ಮದ ಫಲವಿದೆಯೇ? ಅದನ್ನು ಅವನು ಹೇಗೆ ಅನುಭವಿಸಿದ? ಮೊದಲು ಇಲ್ಲದೇ ಇದ್ದವನಿಗೆ ಕರ್ಮದ ಫಲ ಹೇಗೆ ಸಾಧ್ಯ? ಇನ್ನೊಂದು ರೀತಿಯಾಗಿ ಹೇಳುವುದಾದರೆ, ಪೂರ್ವಜನ್ಮದ ಕರ್ಮವೇ ಇಲ್ಲದಿದ್ದಲ್ಲಿ ಮೊದಲ ಹುಟ್ಟಿನ ಅವಶ್ಯಕತೆಯಾದರೂ ಏನು? ದೇವರು ಬಿಗ್ ಬ್ಯಾಂಗ್ ಅರಿತಿದ್ದಾನ? ಮತ್ತು ನಾವು ಆತನನ್ನು ಹಿಂದಕ್ಕೆ ಕಳುಹಿಸಿ ಮೋಕ್ಷದ ಹಾದಿ ತೋರಿಸಬೇಕಿದೆಯೆ?

ಹುಟ್ಟು ಕರ್ಮಚಕ್ರದ ಫಲವಾದರೆ, ಮೊದಲ ಹುಟ್ಟಿಗೆ ಕಾರಣವಾದ ಕರ್ಮ ಯಾವುದು? ಆರಂಭಿಕ ಜೀವನ ಹೇಗಿತ್ತು? ಹುಟ್ಟಿನ ಆರಂಭಕ್ಕೆ ಸಾಕ್ಷ್ಯಗಳು ಇವೇ ಕೇಳುತ್ತವೆ.

ಕರ್ಮಕ್ಕೆ ಸಂಬಂಧಿಸಿದಂತೆ ಇನ್ನೊಂದು ವಿಚಾರ, ಪೂರ್ವಜನ್ಮದಲ್ಲಿ ನಿಮಗೆ ಗೊತ್ತಿಲದೇ ಇರುವ ಕಾರ್ಯಕ್ಕೆ ಈಗ ನೀವು ಹೇಗೆ ಬಾಧ್ಯಸ್ಥರಾಗುತ್ತೀರಿ? ಪೂರ್ವಜನ್ಮದ ಪಾಪವನ್ನು ಸಮಾಧಾನಗೊಳಿಸುವಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ ಎಂದು ನಿಮಗೆ ತಿಳಿಯಲು ಸಾಧ್ಯವೇ? ಒಬ್ಬ ಬಂದಿದ್ದು ಎಲ್ಲಿಂದ, ಎಲ್ಲಿಗೆ ಹೋಗುತ್ತಿದ್ದಾನೆ ಮತ್ತು ಅಂತಿಮವಾಗಿ ಎಲ್ಲಿಗೆ ತಲುಪುತ್ತಾನೆ ಎಂಬುದು ಯಾರಿಗೆ ಗೊತ್ತು? ಇದು ಒಬ್ಬ ಮನುಷ್ಯನನ್ನು ನಿರಾಶವಾದ ಅಥವಾ ಅಸಹಾಯಕತೆಗೆ ತಳ್ಳುತ್ತದೆ. ಕೊನೆಯಲ್ಲಿ ತುಂಬಾ ಕಷ್ಟಕರವಾದ ಮೋಕ್ಷವನ್ನು ಪಡೆಯುವ ನಿರ್ಣಾಯಕ ಯೋಜನೆಯಿಂದ ಹೊರ ಉಳಿದುಬಿಡುತ್ತಾನೆ.

ಕೆಳಸ್ತರದಲ್ಲಿ ಪುನರ್ಜನ್ಮ ಪಡೆದ ಕ್ರಿಮಿಕೀಟಗಳ ಜೀವನ ಎಷ್ಟು ಅಸಹಾಯಕವಾಗಿರಬಹುದು? ಅವುಗಳಿಗೆ ತಮ್ಮ ಪಾಪ ನಿವಾರಿಸಿಕೊಳ್ಳಲು ಕರ್ಮ-ಕರ್ತವ್ಯಗಳನ್ನು ಮಾಡುವ ಯೋಗವೇ ಇಲ್ಲ. ಒಂದು ಚರಂಡಿಯಲ್ಲಿ ತಮ್ಮ ಭವಿಷ್ಯವನ್ನು ಹುಡುಕುವ ಬಡಪಾಯಿಗೆ ಯಾವ ನಂಬಿಕೆಗಳು ಇದ್ದಾವು?

ಭಾರತೀಯ ಸಂಸ್ಕೃತಿ ಉತ್ಕೃಷ್ಠ ಮತ್ತು ಗುರುಪರಂಪರೆಯಿಂದ ವಿಶ್ವದ ಅತ್ಯುಚ್ಛ ಸ್ಥಾನದ ಆಧ್ಯಾತ್ಮ ಕೇಂದ್ರವಾಗಿದ್ದರೆ, ಪ್ರಬುದ್ಧ ಸಮಾಜದ ಲೆಕ್ಕಾಚಾರದಲ್ಲಿ, ಭಾರತದಲ್ಲಿ ಇಷ್ಟೊಂದು ಕರ್ಮದ ಪಾತಕಿಗಳಿದ್ದಾರೆ? ಜಗತ್ತಿನ 2/3 ಭಾಗದಷ್ಟು ಕುಷ್ಠರೋಗಿಗಳು, 50 ಶೇಕಡಾಕ್ಕಿಂತಲೂ ಅಧಿಕ ಕುರುಡರು ಭಾರತದ ಈ ನಂಬಿಕೆಯ ಅಧಿಕೇಂದ್ರದಲ್ಲಿ ನೆಲೆಸಿದ್ದಾರೆ.

ಕೊನೆಯದಾಗಿ, ಮೋಕ್ಷದ ಆಶಯವನ್ನು ಬೋಧಿಸಿದ ಗುರುಗಳಿಂದ ಮಾರ್ಗದರ್ಶನ ಪಡೆದ, ಹಿಂದೂ ಧರ್ಮದ ಅಮೂಲ್ಯ ರಥವನ್ನು ಎಳೆಯುತ್ತಿರುವ ಆರಾಧಕರ ಭಾರವನ್ನು ಸಹಿಸಲು, ನಂಬಿಕೆಯ ಈ ಮುರಿದ ಚಕ್ರದಿಂದ ಸಾಧ್ಯವೇ ಇಲ್ಲ ಎಂದು ನನಗೆ ಕಾಣುತ್ತಿದೆ.

ಈ ಇಡೀಯ ವ್ಯವಸ್ಥೆ, ಕೇವಲ ಭ್ರಮೆಯ ಮರೀಚಿಕೆ ಅಥವಾ ಮಾಯೆ, ಇದು ಒಬ್ಬ ಮನುಷ್ಯ ಅಂತಿಮವಾಗಿ ಮೋಕ್ಷ ಪಡೆ ಅಂಬ ತತ್ವಶಾಸ್ತ್ರವನ್ನು ಹೇಳುತ್ತಾ ಆತನಿಗೆ ಮೋಸ ಮಾಡುತ್ತದೆ.

ಅಂತಿಮವಾಗಿ, ನಾನು ತುಂಬಾ ಕಟು ವಿಚಾರಗಳನ್ನು ಹೇಳಿದ್ದೇನೆ ಎಂದು ನನಗೆ ತಿಳಿದಿದೆ. ನನ್ನ ಹಿಂದೂ ಸ್ನೇಹಿತರಿಗೆ ಅಗೌರವ ತೋರಿಸುವ ಆಶಯ ನನಗಿಲ್ಲ. ಆದರೆ, ತಮ್ಮ ಧಾರ್ಮಿಕ ವ್ಯವಸ್ಥೆಯ ನಂಬಿಕೆಗಳನ್ನು ಅವಲೋಕಿಸಲು, ಅವರ ನಂಬಿಕೆ ಹಾಕಿರುವ ಸಾಂಸ್ಕೃತಿಕ ಗಡಿಯಿಂದ ಹೊರಗೂ ನೋಡಿ ಎಂದು ನಾನು ಅವರಿಗೆ ಸವಾಲನ್ನು ನೀಡುತ್ತಿದ್ದೇನೆ. ಈ ಬರಹದಿಂದ ಯಾರಿಗಾದರೂ ನೋವಾಗಿದ್ದಲ್ಲಿ ನಾನು ಕ್ಷಮೆ ಕೇಳುತ್ತಿದ್ದೇನೆ. ಆಕ್ರಮಣಕಾರಿಯಾಗಿ ಗೋಚರಿಸದೆ, ಸವಾಲು ಮಾಡುವುದು ಸುಲಭಸಾಧ್ಯವಲ್ಲ. ನೀವು ನಿಮ್ಮ ಆಧ್ಯಾತ್ಮದ ಪ್ರಯಾಣದಲ್ಲಿ ಸ್ವಲ್ಪ ಸಮಯವನ್ನು ನಿಮ್ಮ ನಂಬಿಕೆಗೆ ಸಂಬಂಧಿಸಿದ ಸತ್ಯದ ಮಾನ್ಯತೆಯನ್ನು ಪರಿಶೀಲಿಸುತ್ತೀರಿ ಎಂದು ನಾನು ನಂಬಿದ್ದೇನೆ.

ಕೊನೆಯಲ್ಲಿ, ಜೀಸಸ್ ದಯಮಾಡುವ ಬದುಕು ಎಲ್ಲಾ ಜನರಿಗೂ ಇದೆ ಎಂದು ನಾನು ನಂಬಿದ್ದೇನೆ. ಇದು ಧಾರ್ಮಿಕ ಕಟ್ಟಳೆಗಳ ಮೂಲಕವಲ್ಲ,ಬದಲಾಗಿ ಆತನ ಜನರನ್ನು ನಂಬುವುದರ ಸರಳತೆಯ ಮೂಲಕ ಮತ್ತು ನಿಮ್ಮ ಆತ್ಮದ ಶೂನ್ಯತೆಯಿಂದ ನಿಮ್ಮನ್ನು ಸ್ವತಂತ್ರಗೊಳಿಸುವುದರ ಮೂಲಕ ಹಾಗೂ ಪುನರ್ಜನ್ಮದ ಕಲ್ಪನೆಯಿಂದ ಹೊರಬಂದು, ಜಾಗೃತವಾಗಿ ತಪ್ಪನ್ನು ಖಂಡಿಸಿ ನೀವು ಹೊಸಜನ್ಮವನ್ನು ಪಡೆಯಬಹುದು.

ಜೀಸಸ್ ಇಲ್ಲಿ ಏನು ಹೇಳಿದ್ದಾನೆಂದರೆ, ಮತ್ತಾಯನು 11:28-30 28 “ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು.. 29 ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. 30 ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ.”

 

 
ದೇವರೊಂದಿಗೆ ಸಂಬಂಧವನ್ನು ಹೊಂದುವುದು ಹೇಗೆ

ಹಿಂದೂ ಸಂಪನ್ಮೂಲಗಳು

ಕನ್ನಡ-Kannada

Hinduism and Reincarnation

 

 

 

Copyright permission by Random House Inc./Multnomah on New Birth or Rebirth by Ravi Zacharias

Leave a Reply