ಹಿಂದೂ ಧರ್ಮದ ಪವಾಡಗಳು

ಹಲವಾರು ಹಿಂದೂಗಳು ತಮ್ಮ ನಂಬಿಕೆಯ ಕುರಿತಾಗಿ ತುಂಬಾ ಪ್ರಾಮಾಣಿಕರಾಗಿದ್ದಾರೆ ಎಂಬುದನ್ನು ನಾನು ತಿಳಿದಿದ್ದೇನೆ. ಆದರೆ, ತಮ್ಮ ಧರ್ಮ ಹೇಳುವುದು ಮಾತ್ರ ಸತ್ಯ ಎಂದು ವಾದಿಸುವುದು ಮಾತ್ರ ಗಂಭೀರವಾಗಿ ತಪ್ಪು.

ಇದಕ್ಕೆ ಒಂದು ಉದಾಹರಣೆಯೆಂದರೆ, 1995ರಲ್ಲಿ ದೇವರು ಹಾಲು ಕುಡಿಯುವ ಘಟನೆ. ಒಬ್ಬ ಧಾರ್ಮಿಕ ಅನುಯಾಯಿಯ ಕನಸಿಲ್ಲಿ ಗಣೇಶನ ಮೂರ್ತಿ, ಹಾಲು ಕುಡಿಯುವ ವಿಚಾರ ದೇಶದೆಲ್ಲೆಡೆ, ವಿಶ್ವದೆಲ್ಲೆಡೆ ವಿವಿಧ ದೇವಾಲಯಗಳಲ್ಲಿ ಗಣೇಶನಿಗೆ ಹಾಲು ನೀಡುವ ರೋಗವಾಗಿ ಮಾರ್ಪಟ್ಟಿತ್ತು. ಎಲ್ಲಡೆ ಒಂದೇ ರೀತಿಯ ಪವಾಡ ನಡೆದಿತ್ತು.

ಆದರೆ, ಇದು ಪವಾಡವಾಗಿರದೆ, ದೃಢ ದಾಖಲೆಗಳ ಆಧಾರದಲ್ಲಿ, ಭೌತಶಾಸ್ತ್ರಕ್ಕನುಗುಣವಾಗಿ, ಕ್ಯಾಪಿಲ್ಲರಿ ಕ್ರಿಯೆ ವಿಧಾನದ ಮೂಲಕ ಇದೊಂದು ಸಹಜ ಪ್ರಕ್ರಿಯೆಯಾಗಿದ್ದು, ವಿಗ್ರಹ ಹಾಲು ಕುಡಿದಂತೆ ಭಾಸವಾಗುತ್ತದೆ.

ಈ ವಿಷಯವನ್ನು ದೂರದರ್ಶನ ಕಾರ್ಯಕ್ರಮಗಳಲ್ಲಿ ನೋಡಿದ ನೆನಪು ನನಗಿದೆ. ಅದರಲ್ಲಿ ವಿವಿಧ ಧರ್ಮಗಳ ಪವಾಡಗಳ ಕುರಿತು ಚರ್ಚೆಗಳು ನಡೆದವು. ಕೆಲವು ಭಾರತೀಯರ ತಂಡ ಮಿಕ್ಕಿಮೌಸ್ ಪ್ರತಿಮೆಯನ್ನು ತಯಾರಿಸಿ, ಅದರ ಮುಂದೆ ಹಾಲನ್ನು ಇಟ್ಟಾ ಅದು ಕೂಡ ಸೇವಿಸಿತು. ಆಗ ಹಿಂದೂವಾದಿಗಳ ಮುಖದಲ್ಲಿನ ನಿರಾಸೆಯನ್ನು ನಾನು ಗಮನಿಸಿದೆ. ಆಗ ತಿಳಿಯಿತು ಹಾಲು ಕುಡಿಯುವುದು ಸುಳ್ಳು ಅಂತ.
ಏನಾಗಿದೆ ಎಂದು ವೈಜ್ಞಾನಿಕವಾಗಿ ತಿಳಿಯದೆ, ನಡೆದ ಮುಗ್ಧ ಘಟನೆ ಎಂದು ಇದನ್ನು ಹೇಳಬಹುದು. ಆದರೆ ನಾನು ಯೋಚಿಸುವುದೇನೆಂದರೆ, ಕೆಲವು ಧರ್ಮಗಳು, ಆಧ್ಯಾತ್ಮಿಕ ಹಕ್ಕನ್ನು ಪಡೆದಿವೆ ಎನ್ನುವ ದರ್ಪ ತೋರಿಸುತ್ತಾ, ತಮ್ಮ ಧರ್ಮದಲ್ಲಿ ಮಾತ್ರ ಪವಾಡಗಳು ಸಾಧ್ಯ ಎಂಬ ಮನಸ್ಥಿತಿಯನ್ನು ಹೊಂದಿರುವ ಎಲ್ಲರಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ. ಯಾವುದೇ ಶಕ್ತಿಯನ್ನು ದೇವರ ಪ್ರಭಾವವೇ ಎಂದು ತಿಳಿಯಲು, ಪರೀಕ್ಷಿಸಬೇಕು ಎಂದು ಬೈಬಲ್ ಹೇಳುತ್ತದೆ. ಹಾಗಾಗಿ ಧಾರ್ಮಿಕ ಅನುಭವವನ್ನು ಸ್ವೀಕರಿಸದೆ, ದೇವರ ಪ್ರತಿನಿಧಿ ಅಥವಾ ದೇವರ ಪರವಾಗಿ ಮಾತನಾಡುವ ಜನರು ಅಥವಾ ಪ್ರಸಂಗಗಳನ್ನು ನಾವು ಸತ್ಯಶೋಧನೆಯ ಮೂಲಕ ಪರೀಕ್ಷಿಸಬೇಕಿದೆ.
ಒಟ್ಟಿನಲ್ಲಿ ನಾನು ಹಿಂದೂ ಧರ್ಮದ ಕುರಿತು ತುಂಬಾ ಬರೆದುಬಿಟ್ಟೆ. ನನ್ನ ವಿವಿಧ ಲೇಖನಗಳು, ಧರ್ಮದ ಗುಣಲಕ್ಷಣಗಳಿಗೆ ಹೊಸ ವ್ಯಾಖ್ಯಾನವನ್ನು ನೀಡುತ್ತವೆ ಎಂಬ ಭರವಸೆಯಿದೆ.

 

 

ದೇವರೊಂದಿಗೆ ಸಂಬಂಧವನ್ನು ಹೊಂದುವುದು ಹೇಗೆ

ಹಿಂದೂ ಸಂಪನ್ಮೂಲಗಳು

ಕನ್ನಡ-Kannada

Miracles in Hinduism

Leave a Reply